ಕಲ್ಸಂಕ ರಸ್ತೆ ಅಪಘಾತ ಪ್ರಕರಣ- ಬೈಕ್ ಚಾಲಕನಿಗೆ 6 ತಿಂಗಳು ಶಿಕ್ಷೆ

ಉಡುಪಿ ಎ.27 (ಉಡುಪಿ ಟೈಮ್ಸ್ ವರದಿ): ಐದು ವರ್ಷಗಳ ಹಿಂದೆ ಕಲ್ಸಂಕ ಗುಂಡಿಬೈಲು ಸಮೀಪದ ಜಂಕ್ಷನ ಬಳಿ ದ್ವಿಚಕ್ರ ವಾಹನಗಳ ನಡುವೆ ನಡೆದ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮರ್ವಿನ್ ವಿಲ್ಫ್ರೆಡ್ ಡಿ ಸೋಜ್ ಗೆ ಜೈಲು ಶಿಕ್ಷೆ ವಿಧಿಸಿ 1ನೇ ಹೆಚ್ಚುವರಿ ಸಿ ಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯ ತೀರ್ಪು ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಸಂಚಾರ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಶೇಖರ ರವರು ತನಿಖೆ ನಡೆಸಿ ಆರೋಪಿಯ ವಿರುದ್ಧ ದೋಷಾರೋಪಣಾ ಪತ್ರವನ್ನು ನ್ಯಾಯಾಲಾಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶಾಮ್ ಪ್ರಕಾರ ಅವರು ಆರೋಪಿತನ ವಿರುದ್ಧ ಆರೋಪವು ರುಜುವಾತಾದ ಹಿನ್ನೆಲೆಯಲ್ಲಿ ಎ.8 ರಂದು  ಆರೋಪಿಗೆ 6 ತಿಂಗಳ ಕಾರಾಗೃಹ ವಾಸ ಶಿಕ್ಷೆ ಮತ್ತು 1000 ರೂ ದಂಡ ವಿಧಿಸಿ ತೀರ್ಪನ್ನು ನೀಡಿ ಆದೇಶಿಸಿದ್ದಾರೆ.

ಪ್ರಕರಣದ ವಿಚಾರಣೆ ವೇಳೆ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಮೋಹಿನಿ ಕೆ  ಇವರು ವಾದವನ್ನು ಮಂಡಿಸಿದ್ದರು. ಈತನು 2017 ರ ಅ.5 ರಂದು ಆರೋಪಿ ಮರ್ವಿನ್ ವಿಲ್ಫ್ರೆಡ್ ಡಿ ಸೋಜ್ ಎಂಬಾತ ಕಲ್ಸಂಕ ಗುಂಡಿಬೈಲು ಸಮೀಪದ ಜಂಕ್ಷನ ಬಳಿ ಗುಂಡಿಬೈಲು ಕಡೆಗೆ ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಪ್ರಕಾಶ ಶೆಟ್ಟಿಯವರು ದೊಡ್ಡಣಗುಡ್ಡೆ ಕಡೆಗೆ ಹೋಗಲು ತಮ್ಮ ದ್ವಿಚಕ್ರ ವಾಹನವನ್ನು ತಿರುಗಿಸುತ್ತಿರುವಾಗ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಪ್ರಕಾಶ ಶೆಟ್ಟಿ ಮತ್ತು ಅವರ ಹೆಂಡತಿ ಲಕ್ಷ್ಮೀ ಪಿ ಹಾಗೂ ಅವರ ಮಗನಾದ ಆಯುಷ ರವರು ರಸ್ತೆಗೆ ಬಿದ್ದು ಗಾಯಗೊಂಡಿದ್ದರು, ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Leave a Reply

Your email address will not be published. Required fields are marked *

error: Content is protected !!