ಫಾರೂಕ್ ಚಂದ್ರನಗರ ನೇತೃತ್ವದಲ್ಲಿ 52 ಕುಟುಂಬಕ್ಕೆ ರಂಜಾನ್ ಕಿಟ್ ವಿತರಣೆ
ಕಾಪು: ಮಲಬಾರ್ ಗೋಲ್ಡ್ & ಡೈಮಂಡ್ಸ್ ವತಿಯಿಂದ ಕಾಪು ತಾಲೂಕಿನ 52 ಕುಟುಂಬಕ್ಕೆ ರಂಜಾನ್ ಕಿಟ್ ಕಾಪು ಸಮಾಜ ಸೇವಾ ವೇದಿಕೆ ಅಧ್ಯಕ್ಷ ಫಾರೂಕ್ ಚಂದ್ರನಗರ ನೇತೃತ್ವದಲ್ಲಿ ಆರ್.ಕೆ ಗೆಸ್ಟ್ ಹೌಸ್ ಮಜೂರಿನಲ್ಲಿ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಫಾರೂಕ್ ಮಲಬಾರ್ ಗೋಲ್ಡ್ & ಡೈಮಂಡ್ಸ್ ಕಳೆದ ಹತ್ತಾರು ವರ್ಷದಲ್ಲಿ ಜಾತಿ ಭೇದವಿಲ್ಲದೆ ಹತ್ತಾರು ಸಾಮಾಜಿಕ ಕೆಲಸ, ಬಡವರ ಉದ್ದಾರದ ಕೆಲಸವನ್ನು ಮಾಡುತ್ತಿದೆ ಕೋವಿಡ್ ಸಂದರ್ಭ ಇಡೀ ಜಿಲ್ಲೆಯ 7000 ಕ್ಕೂ ಮಿಕ್ಕಿ ಬಡ ಕುಟುಂಬವನ್ನು ಗುರುತಿಸಿ ಅಕ್ಕಿ ಹಾಗೂ ಜಿನಸು ಕಿಟ್ ವಿತರಿಸಿದ್ದು ನಿಜಕ್ಕೂ ಶ್ಲಾಘನೀಯ. ಅದಲ್ಲದೆ ಉಚಿತ ಮೆಡಿಸಿನ್ ಕಿಟ್,ಬಡ ಹೆಣ್ಣು ಮಕ್ಕಳ ಮದುವೆಗೆ ಸಹಾಯಧನ ,ವಿದ್ಯಾರ್ಥಿಗಳಿಗೆ ಸ್ಕೋಲೋರ್ಷಿಪ್, ಅರ್ಧದಲ್ಲಿ ನಿಂತ ಮನೆ ಪೂರ್ತಿಗೊಳಿಸಲು ಸಹಾಯಧನ, 100 ಟ್ಯಾಬ್ ವಿತರಿಸಿ ಬಡಮಕ್ಕಳ ವಿದ್ಯೆಗೆ ಪ್ರೋತ್ಸಾಹ, ಜಾತಿ ಬೇದವಿಲ್ಲದೆ ಪ್ರತಿಯೊಂದು ಜಾತಿಯ ಹಬ್ಬದ ಆಚರಣೆ, ರಾಷ್ಟೀಯ ಮಟ್ಟದ ಎಲ್ಲಾ ಹಬ್ಬದ ಆಚರಣೆ ನಿಜಕ್ಕೂ ಇವರ ಕೆಲಸ ದೇವರು ಹಾಗೂ ಸಮಾಜ ಮೆಚ್ಚುವಂತಹದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ಉಡುಪಿ ಚಾರಿಟಿ ಉಸ್ತುವಾರಿ ತಂಝೀಮ್ ಶಿರ್ವ, ಕಾಪು ಸಮಾಜ ಸೇವಾ ವೇದಿಕೆ ಗೌರವಾಧ್ಯಕ್ಷ ದಿವಾಕರ ಬಿ ಶೆಟ್ಟಿ ಕಳತ್ತೂರು, ಚಂದ್ರನಗರ ಮಸ್ಜಿದ್ ಇ ನೂರ್ ಖತೀಬರಾದ ರಮೀಝ್ ಹನಫಿ, ಶರ್ಫುದ್ದಿನ್ ಶೇಖ್ ಮಜೂರು, ಬಿ.ಎ.ಫಕ್ರುದ್ದಿನ್ ಆಲಿ ಚಂದ್ರನಗರ, ಕಾಪು ಪುರಸಭೆ ಸದಸ್ಯ ನೂರುದ್ದಿನ್ ಅಹ್ಮದಿಮೋಹಲ್ಲ, ಮಲಬಾರ್ ಗೋಲ್ಡ್ & ಡೈಮಂಡ್ಸ್ ಸಿಬ್ಬಂದಿ ಫಯಾಜ್ ಅಹ್ಮದ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.