| ಉಡುಪಿ ಎ.26 (ಉಡುಪಿ ಟೈಮ್ಸ್ ವರದಿ): ಜಿಎಸ್.ಟಿ ತೆರಿಗೆ ವಂಚಿಸುವ ಸಲುವಾಗಿ ನಕಲಿ ದಾಖಲೆ ಸೃಷ್ಟಿಸಿ ನಕಲಿ ಜಿಪಿಎ ತಯಾರಿಸಿರುವ ಕುರಿತು ಎಂಟು ಮಂದಿಯ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಂತೋಷ್ ಮಲಿಕ್, ಅಜಿತ್ ಜಯನ್, ಅಬ್ದುಲ್ಲಾ ನೌಮಾನ್ ಎ.ಆರ್, ಜಿತು ಮುಂಬೈ, ಹಾರೀಫ್ ಯಾನೆ ಆರೀಫ್, ಬಿ. ರಘುನಾಥ ಪೈ ಯಾನೆ ಗುರು, ದಸ್ತಗಿರ್, ಕಾಂಚಿವರದ ರಾಜು ಪ್ರಕರಣದ ಆರೋಪಿಗಳು. ಈ ಎಂಟು ಮಂದಿ ಆರೋಪಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವುಗಳನ್ನು ಜಿಎಸ್ಟಿ ಪ್ರಾಧಿಕಾರಕ್ಕೆ ನೀಡಿರುವುದಲ್ಲದೆ ನಕಲಿ ಜಿಪಿಎ ತಯಾರಿಸಿ ಹೈಕೋರ್ಟ್ ನಲ್ಲಿ ಸಲ್ಲಿಸಲು ಬಳಸಿ, ವಾಣಿಜ್ಯ ತೆರಿಗೆ ಇಲಾಖೆಗೆ ಮೋಸ ಮಾಡಿರುವುದಾಗಿ ಆರೋಪಿಸಲಾಗಿದೆ.
ಹಾಗೂ ಸುಹೇಲ್ ಖಾದರ್ ಎಂಬಾತ ಈ ನಕಲಿ ಜಿಪಿಎ ಹಾಗೂ ದಾಖಲೆಗಳನ್ನು ವಾಣಿಜ್ಯ ತೆರಿಗೆ ಕಚೇರಿಗೆ ಕಳುಹಿಸಿಕೊಟ್ಟಿರುವುದಾಗಿ ಅಜ್ಜರಕಾಡಿನ ವಾಣಿಜ್ಯ ತೆರಿಗೆ ಭವನದ ವಾಣಿಜ್ಯ ತೆರಿಗೆ ನಿರೀಕ್ಷಕರಾದ ನಾಗರತ್ನ ಎನ್. ಕಾಮತ್ ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
| |