| ಉಡುಪಿ: ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಕೆಜೆ ಹಳ್ಳಿ ಡಿಜೆ ಹಳ್ಳಿ ಮಾದರಿಯಲ್ಲಿ ನಡೆದ ಗಲಭೆಯ ರೂವಾರಿ ಯಾರು? ತಪ್ಪಿತಸ್ಥ ಸಮಾಜ ಕಂಟಕರು ಯಾರು;? ದಾಂಧಲೆಯ ಹಿಂದೆ ವ್ಯವಸ್ಥಿತ ಪಿತೂರಿ ನಡೆಸಿದವರು ಯಾರು? ಎಂಬೆಲ್ಲಾ ವಿಚಾರಗಳನ್ನು ರಾಜ್ಯದ ಜನತೆ ಚೆನ್ನಾಗಿಯೇ ಅರಿತುಕೊಂಡಿದ್ದಾರೆ.
ಪದೇ ಪದೇ ಉದ್ದೇಶಪೂರ್ವಕ ಗಲಭೆಗಳನ್ನು ಸೃಷ್ಟಿಸಿ ಸಾಮಾಜಿಕ ಶಾಂತಿ ಸುವ್ಯವಸ್ಥೆಯನ್ನು ಹಾಳುಗೆಡಹಿ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ನಷ್ಟವನ್ನುಂಟುಮಾಡುತ್ತಿರುವ ದೇಶದ್ರೋಹಿ ಸಮಾಜ ಕಂಟಕರ ಆಸ್ತಿಯನ್ನು ಮುಟ್ಟುಗೋಲು ಹಾಕಿ ಗಲಭೆ ನಿಯಂತ್ರಿಸಲು ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ ಮಾದರಿಯಂತೆ ಕರ್ನಾಟಕದಲ್ಲೂ ಬುಲ್ಡೋಜರ್ ಕಾನೂನು ಶೀಘ್ರ ಜಾರಿಗೆ ಬರುವಂತಾಗಲಿ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
ಸದಾ ಒಂದೇ ವರ್ಗದ ಓಲೈಕೆಯಲ್ಲಿ ನಿರತರಾಗಿರುವ ಮಾಜಿ ಸಿ.ಎಂ. ಸಿದ್ಧರಾಮಯ್ಯ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ರವರು ಈ ವಿಚಾರದಲ್ಲಿ ವಿಚಲಿತರಾಗಿದ್ದು ತೀವ್ರ ಆತಂಕಕ್ಕೊಳಗಾದಂತೆ ವರ್ತಿಸುತ್ತಿರುವುದು ವಿಪರ್ಯಾಸ. ತನ್ನ ಜೀವಿತಾವಧಿಯಲ್ಲಿ ಒಂದೇ ಒಂದು ಹಿಂದೂ ಪರ ಹೇಳಿಕೆ ನೀಡದ ಹಿಂದೂ ವಿರೋಧಿ ಮನಸ್ಥಿತಿಯ ಮಾಜಿ ಸಿ.ಎಂ. ಸಿದ್ಧರಾಮಯ್ಯ ಆರ್‌ಎಸ್ಎಸ್ ದೇಶಭಕ್ತ ಸೇವಾ ಸಂಘಟನೆಯನ್ನು ಮೂಲಭೂತವಾಧಿ ದೇಶದ್ರೋಹಿ ಸಂಘಟನೆಗಳ ಜೊತೆ ಹೋಲಿಕೆ ಮಾಡುವ ಮೂಲಕ ತನ್ನ ಬೌದ್ಧಿಕ ದಿವಾಳಿತನ ಹಾಗೂ ಮೂರ್ಖತನದ ಪರಮಾವಧಿಯನ್ನು ಪ್ರದರ್ಶಿಸಿದ್ದಾರೆ ಎಂದು ಕುಯಿಲಾಡಿ ತಿಳಿಸಿದ್ದಾರೆ.
ದುರಾಡಳಿತ ಮತ್ತು ಹಗರಣಗಳ ಸರಮಾಲೆಯೊಂದಿಗೆ ನಿರಂತರ ಸೋಲಿನಿಂದ ಕಂಗೆಟ್ಟು ತೀವ್ರ ಅಧ:ಪತನದಲ್ಲಿರುವ ಕಾಂಗ್ರೆಸ್ ದೇಶ ವಿರೋಧಿಗಳನ್ನು ಬೆಂಬಲಿಸುತ್ತಾ, ರಾಜ್ಯದೆಲ್ಲೆಡೆ ಅರಾಜಕತೆ ಸೃಷ್ಟಿಸಲು ಹವಣಿಸುತ್ತಿರುವ ಕುಕೃತ್ಯವನ್ನು ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು ಕಾಂಗ್ರೆಸ್ ಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. | |