ಉಡುಪಿ: ಯಾತ್ರಾರ್ಥಿಯೊಬ್ಬರ ಲಕ್ಷಾಂತರ ರೂ. ಮೌಲ್ಯದ ಸೊತ್ತು ಕಳವು
ಉಡುಪಿ ಎ.26 (ಉಡುಪಿ ಟೈಮ್ಸ್ ವರದಿ): ಮಹಾರಾಷ್ಟ್ರದಿಂದ ಉಡುಪಿ ಶ್ರೀಕೃಷ್ಣ ಮಠಕ್ಕೆ ಬಂದಿದ್ದ ಯಾತ್ರಾರ್ಥಿಯೊಬ್ಬರು ಲಕ್ಷಾಂತರ ರೂ ಮೌಲ್ಯದ ಸೊತ್ತು ಕಳವಾಗಿರುವ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಹಾರಾಷ್ಟ್ರದ ಮುಂಬಯಿ ವೆಸ್ಟ್ ನ ಶಾಂತಾ ಜಿ. ಕುಂದರ್ ವರು ಎ.25 ರಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಬಂದಿದ್ದರು. ಈ ವೇಳೆ ದೇವರ ದರ್ಶನ ಪಡೆದು ಊಟ ಮಾಡಿ ತೆರಳಿದ್ದಾರೆ. ಈ ನಡುವೆ ಬೆಳಿಗ್ಗೆ 11:15 ಗಂಟೆಯಿಂದ 1:10 ನಡುವಿನ ಸಮಯದಲ್ಲಿ ಕಳ್ಳರು ಇವರ ಬ್ಯಾಗ್‍ನ್ನು ಕತ್ತರಿಸಿ, ಅದರಲ್ಲಿದ್ದ ಪರ್ಸ್ ನ್ನು ಕಳವು ಮಾಡಿದ್ದಾರೆ. ಕಳವಾದ ಪರ್ಸ್ ನಲ್ಲಿ 1,40,000 ರೂ. ಮೌಲ್ಯದ 30 ಗ್ರಾಂ ತೂಕದ ಹವಳದ ಸರ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಸ್ವೈಪ್ ಕಾರ್ಡ್ ಹಾಗೂ 4,000 ನಗದು ಇದ್ದು, ಕಳವಾದ ಸೊತ್ತುಗಳ ಒಟ್ಟು ಮೌಲ್ಯ 1,44,000 ರೂಪಾಯಿ ಆಗಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.