ಮಾಸ್ಕ್ ಧರಿಸದೆ ನಿಯಮ ಉಲ್ಲಂಘನೆ: 24 ಗಂಟೆಯಲ್ಲಿ 11,500 ರೂ.ದಂಡ ವಸೂಲು

ಉಡುಪಿ: (ಉಡುಪಿ ಟೈಮ್ಸ್ ವರದಿ)ಜಿಲ್ಲೆಯಲ್ಲಿ ಕೊರೋನ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಜನರು ಯಾವುದೇ ಭಯವಿಲ್ಲದೆ, ಮಾಸ್ಕ್ ಧರಿಸಿದೆ ಸರಕಾರದ ನಿಯಮ ಉಲ್ಲಂಘಿಸಿದರ ಪರಿಣಾಮ ಜಿಲ್ಲೆಯಾದ್ಯಂತ 24 ಗಂಟೆಯಲ್ಲಿ ರೂ. 11500 ದಂಡ ವಸೂಲು ಮಾಡಲಾಗಿದೆ.


ನಗರ ಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ವ್ಯಾಪ್ತಿಯ 2000 ರೂ. ಹಾಗೂ ಪಂಚಾಯತ್ ವ್ಯಾಪ್ತಿಯ 9500 ರೂ. ಸಾರ್ವಜನಿಕರು ಮಾಸ್ಕ್ ಧರಿಸದೇ ಕಾನೂನು ಉಲ್ಲಂಘಿಸಿದ ಪ್ರಕರಣ ದಾಖಲಿಸಿ, ದಂಡ ವಸೂಲು ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!