ಇಂದಿನಿಂದ ದೇಶದಲ್ಲಿ ರಾಮರಾಜ್ಯಕ್ಕೆ ನಾಂದಿ: ಕುಯಿಲಾಡಿ ಸುರೇಶ
ಕಾಪು (ಉಡುಪಿ ಟೈಮ್ಸ್ ವರದಿ) : ಅಖಂಡ ಭಾರತವನ್ನು ಇಂದು ಒಂದು ಮಾಡಿದ ದಿನ. ಅಯೋಧ್ಯೆಯ ರಾಮಜನ್ಮ ಭೂಮಿಯಲ್ಲಿ ಇಂದು ಶಿಲಾನ್ಯಾಸ ಮತ್ತು ಭೂಮಿ ಪೂಜೆ ಮಾಡುವುದರ ಮೂಲಕ ದೇಗುಲಕ್ಕೆ ಚಾಲನೆ ದೊರಕಿದೆ. ಅಂದಿನ ಕರಸೇವೆಗೆ ನಮ್ಮ ಬಹಳಷ್ಟು ನಾಯಕರು ಮತ್ತು ಕಾರ್ಯಕರ್ತರು ಅಯೋಧ್ಯೆಗೆ ಹೋಗಿದ್ದರು. ನಮ್ಮ ಕಾರ್ಯಕರ್ತರ ಶತಮಾನದ ಕನಸು ನನಸಾಗಿದೆ. ಅವರಿಗೆಲ್ಲ ಇಂದು ಧನ್ಯತಾಭಾವ ಮೂಡಿದೆ. ಇಂದು ರಾಮಜನ್ಮಭೂಮಿಯಲ್ಲಿ ಭೂಮಿಪೂಜೆ ಮಾಡಿದ್ದರಿಂದ ದೇಶದಲ್ಲಿ ರಾಮರಾಜ್ಯಕ್ಕೆ ನಾಂದಿಯಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಪ್ರಭು ಶ್ರೀ ರಾಮಚಂದ್ರನ ಭವ್ಯ ರಾಮ ಮಂದಿರದ ಭೂಮಿ ಪೂಜೆಯ ಪ್ರಯುಕ್ತ ಉಡುಪಿ ಜಿಲ್ಲಾ ಬಿ.ಜೆ.ಪಿ ಯುವ ಮೋರ್ಚಾದ ಸೂಚನೆಯಂತೆ ಅಯೋಧ್ಯಾ ರಾಮನಿಗೆ ಉಡುಪಿ ಕೃಷ್ಣನ ಶಂಖನಾದ ಕಾರ್ಯಕ್ರಮವನ್ನು ಕಾಪು ಮಂಡಲ ಬಿ.ಜೆ.ಪಿ ಯುವ ಮೋರ್ಚಾದ ವತಿಯಿಂದ ಕಟಪಾಡಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬಿಲ್ವ ಪತ್ರೆ ಗಿಡವನ್ನು ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತಾನಾಡಿದರು.ಈ ಸಂದರ್ಭದಲ್ಲಿ ರಾಮ ಮಂದಿರ ಕರ ಸೇವೆಯಲ್ಲಿ ಪಾಲ್ಗೊಂಡ ಈಶ್ವರ್ ಪೊಸರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷರುಗಳಾದ ಗೀತಾಂಜಲಿ ಸುವರ್ಣ, ಪೆರ್ಣಂಕಿಲ ಶ್ರೀಶಾ ನಾಯಕ್, ನಿಕಟ ಪೂರ್ವ ಕ್ಷೇತ್ರ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪ್ರಧಾನ ಕಾರ್ಯದರ್ಶಿ ಅನಿಲ್ ಶೆಟ್ಟಿ, ಉಪಾಧ್ಯಕ್ಷರಾದ ಪವಿತ್ರ ಶೆಟ್ಟಿ, ಬಿ.ಜೆ.ಪಿ ಕಾಪು ಮಂಡಲ ಯುವ ಮೋರ್ಚಾದ ಅಧ್ಯಕ್ಷರಾದ ಸಚಿನ್ ಸುವರ್ಣ ಪಿತ್ರೋಡಿ, ಉಪಾಧ್ಯಕ್ಷ ರಾಘವೇಂದ್ರ ಮಾಂಬೆಟ್ಟು, ಜಿಲ್ಲಾ ಯುವ ಮೋರ್ಚಾದ ಉಪಾಧ್ಯಕ್ಷರಾದ ಸಚಿನ್ ಸಾಲ್ಯಾನ್ ಬೊಳ್ಜೆ, ಕಾರ್ಯದರ್ಶಿ ಪ್ರವೀಣ್ ಕುಮಾರ್, ಕಾರ್ಯಕರಣಿ ಸದಸ್ಯರಾದ ಅಭಿರಾಜ್ ಸುವರ್ಣ, ಜಿಲ್ಲಾ ಕೈಗಾರಿಕ ಪ್ರಕೋಷ್ಟದ ಶ್ರೀಧರ್, ಕುರ್ಕಾಲ್ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ವಿಶ್ವನಾಥ್ ಪೂಜಾರಿ, ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರಂಜಿತ್ ಕೋಟ್ಯಾನ್, ಉಪಾಧ್ಯಕ್ಷರಾದ ಶ್ರೀಕಾಂತ್ ಸಾಲ್ಯಾನ್ ಹಾಗೂ ಜಿಲ್ಲಾ ಮತ್ತು ಕ್ಷೇತ್ರದ ವಿವಿಧ ಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕ್ಷೇತ್ರದ ಯುವ ಮೋರ್ಚಾದ ಕಾರ್ಯದರ್ಶಿ ಸೋನು ಪಾಂಗಳ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿಯಾದ ಸನತ್ ಮಣಿಪುರ ಧನ್ಯವಾದ ಸಲ್ಲಿಸಿದರು.