ದಿವ್ಯಾ ಹಾಗರಗಿ ಮನೆಗೆ ಭೇಟಿ ನೀಡಿದ ಗೃಹ ಸಚಿವರನ್ನು ತನಿಖೆಗೆ ಒಳಪಡಿಸಿ- ಪ್ರಿಯಾಂಕ‌ ಖರ್ಗೆ

ಬೆಂಗಳೂರು ಎ.25: ಪಿಎಸ್ ಐ ನೇಮಕ ಪರೀಕ್ಷೆ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಮನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೋಗಿ ಬಂದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವರನ್ನು ತನಿಖೆಗೆ ಒಳಪಡಿಸಿ ಎಂದು ಸಚಿವ ಪ್ರಿಯಾಂಕ‌ ಖರ್ಗೆ ಅವರು ಟೀಕಿಸಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವ ಸುನೀಲ್ ಕುಮಾರ್ ಅವರು ನನ್ನನ್ನು ವಿಚಾರಣೆಗೆ ಒಳಪಡಿಸುವಂತೆ ಒತ್ತಾಯಿಸಿದ್ದಾರೆ. ಸ್ವಾಮಿ, ಸುನೀಲ್ ಅವರೇ ಈ‌ಪ್ರಕರಣದಲ್ಲಿ ನಿಮ್ಮ ಗೃಹ ಸಚಿವರನ್ನು ಮೊದಲು ವಿಚಾರಣೆ ನಡೆಸಬೇಕು. ಆರೋಪಿ ದಿವ್ಯಾ ಹಾರಗಿ ಮನೆಗೆ ಹೋಗಿ ಗೋಡಂಬಿ ತಿಂದು ಬಂದವರು ಅವರೇ ಅಲ್ಲವೇ ? ಎಂದು ವ್ಯಂಗ್ಯವಾಡಿದರು.

ನೀವೇನು ಕತ್ತೆ ಕಾಯ್ತಿದ್ದೀರ,ಕಡ್ಲೆಪುರಿ ತಿನ್ನುತ್ತಿದ್ದೀರ ? ಎಂದು ಪ್ರಶ್ನಿಸಿರುವ ಅವರು, ಆರೋಪಿ ಮೇಲೆ ಯಾಕೆ ಎಫ್ ಐಆರ್ ಮಾಡಿಲ್ಲ.ಇದರಲ್ಲಿ ಡಿಪಾರ್ಟ್ ಮೆಂಟ್ ಶಾಮೀಲಾಗಿದೆ ಅಂದುಕೊಳ್ಳಬಹುದಾ?ಗೃಹ ಸಚಿವರು ಆರೋಪಿ ಮನೆಗೆ ಹೋಗಿರ್ತಾರೆ.ದಿವ್ಯಾ ಹಾರಗಿ ಮನೆಗೆ ಹೋಗಿದ್ದಾರೆ. ಅವರ ಮನೆಯಲ್ಲಿ ಸನ್ಮಾನ ಮಾಡಿಸಿಕೊಂಡಿದ್ದಾರೆ. ಬದಾಮಿ, ಗೋಡಂಬಿ ತಿಂದು ಬರ್ತಾರೆ. ಯಾಕೆ ಗೃಹ ಸಚಿವರಿಗೆ ನೋಟೀಸ್ ಕೊಟ್ಟಿಲ್ಲ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ನನಗೆ ನಿನ್ನೆ ಸಿಐಡಿಯಿಂದ ನೊಟೀಸ್  ನೀಡಲಾಗಿದೆ ಎಂದ ಅವರು, ಪಿಎಸ್ ಐ ನೇಮಕಾತಿ ಅಕ್ರಮದ ಬಗ್ಗೆ ಮಾಹಿತಿ ಕೇಳಿದ್ದಾರೆ.ನೊಟೀಸ್ ನೋಡಿದರೆ ಸರ್ಕಾರದ ಕಾರ್ಯವೈಖರಿ ಏನೆಂಬುದು ಗೊತ್ತಾಗುತ್ತದೆ‌ ಎಂದಿದ್ದಾರೆ
ರೇಣುಕಾಚಾರ್ಯ ಯುವಕರ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ. ಎಸ್ ಸಿ ಸರ್ಟಿಪಿಕೆಟ್ ಪಡೆದವರು ಯಾರು ? ದಲಿತ ಯುವಕರ ಅವಕಾಶ ಕಿತ್ತವರು ಯಾರು ? ಕಿವಿಮೇಲೆ ಲಾಲ್ ಬಾಗ್ ಇಟ್ಟಿದ್ದಾರೆ ಅಂತಾರೆ. ದಲಿತರ ಮೀಸಲಾತಿ ಕಿತ್ತುಕೊಂಡವರು ನೀವಲ್ವೇ?ನಿಮ್ಮದೇ ಸರ್ಕಾರ,ನಿಮ್ಮದೇ ಅಧಿಕಾರಿ ಇದ್ದಾರೆ. ಸರಿಯಾದ ತನಿಖೆ ಯಾಕೆ ನಡೆಯುತ್ತಿಲ್ಲ ಎಂದು ಕಿಡಿಕಾರಿದರು

Leave a Reply

Your email address will not be published. Required fields are marked *

error: Content is protected !!