ನೀಲಾವರ: ಶ್ರೀ ರಾಮ ವಿಠಲ ದೇವರಿಗೆ ಲಕ್ಷ ತುಳಸಿ ಅರ್ಚನೆ
ನೀಲಾವರ: ಅಯೋಧ್ಯೆ ರಾಮ ಜನ್ಮಭೂಮಿಯಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿಯವರು ಶಿಲಾನ್ಯಾಸ ನೆರವೇರಿಸುವ ಸಂದರ್ಭದಲ್ಲಿ ಕಾರ್ಯಕ್ರಮದ ನಿರ್ವಿಘ್ನತಾ ಸಿದ್ಧಿಗಾಗಿ ನೀಲಾವರ ಗೋಶಾಲೆಯ ಆವರಣದ ಪೇಜಾವರ ಶಾಖಾ ಮಠದಲ್ಲಿ ಶ್ರೀ ರಾಮ ವಿಠಲ ದೇವರಿಗೆ ಲಕ್ಷ ತುಳಸಿ ಅರ್ಚನೆ ಸಲ್ಲಿಸಿ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥರು ನೆರವೇರಿಸಿದರು.
ಶಿಲಾನ್ಯಾಸ ಮುಹೂರ್ತದಲ್ಲಿನ ಎಲ್ಲ ದೋಷ ನಿವಾರಣೆಯಾಗಿ ಶುಭ ಅಮೃತ ಘಳಿಗೆಯ ಪ್ರಾಪ್ತಿ , ಅತೀ ಶೀಘ್ರ ಸುಸೂತ್ರವಾಗಿ ಭವ್ಯ ಮಂದಿರ ನಿರ್ಮಾಣವಾಗಿ ಸಮಸ್ತ ಲೋಕಕ್ಕೆ ಶ್ರೀರಾಮದೇವರ ಪೂರ್ಣ ಕೃಪೆಯಾಗುವಂತೆ ಪ್ರಾರ್ಥಿಸಿ , ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯ ಶ್ರೀ ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥರು ಶ್ರೀಪಾದರು ಚಾತುರ್ಮಾಸ್ಯ ನಿಮಿತ್ತ ಅಯೋಧ್ಯೆಗೆ ತೆರಳದೇ ಉಡುಪಿ ಸಮೀಪದ ನವಗ್ರಹ ಯಾಗ , ಹೋಮ , ರಾಮತಾರಕ ಮಂತ್ರ ಯಾಗವನ್ನು ವೈದಿಕರ ಮೂಲಕ ನೆರವೇರಿಸಿದರು . ಮಠದ ಆರಾಧ್ಯ ಮೂರ್ತಿ ಶ್ರೀ ರಾಮ ವಿಠಲ ದೇವರಿಗೆ ಲಕ್ಷ ತುಳಸಿ ಲಕ್ಷೋಪ ತುಲಸೀ ಅರ್ಚನೆಯನ್ನು ವಿಪ್ರರ ವಿಷ್ಣು ಸಹಸ್ರನಾಮಾವಳಿ ಪಠನ ಸಹಿತ ನೆರವೇರಿಸಿದರು .
ಬಳಿಕ ಮಂಗಳಾರತಿ ಬೆಳಗಿ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು. ಈ ಸಂದರ್ಭ ಪಟ್ಟದ ದೇವರ ಮoಟಪದ ಕೆಳಭಾಗದಲ್ಲಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಭಾವಚಿತ್ರವನ್ನಿಟ್ಟು ತುಳಸೀ ಅರ್ಪಿಸಿ ಗುರುಗಳಿಗೂ ಮಂಗಳಾರತಿ ಬೆಳಗಿ ಗೌರವ ಅರ್ಪಿಸಿದರು . ಗೋವುಗಳಿಗೆ ಗೋಗ್ರಾಸ ಸಮರ್ಪಣೆಯನ್ನೂ ಮಾಡಿದರು . ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಯಿತು . ಬಳಿಕ ಅಯೋಧ್ಯೆಯ ಕಾರ್ಯಕ್ರಮವನ್ನು ಶ್ರೀಗಳು ದೂರದರ್ಶನ ನೇರ ಪ್ರಸಾರದ ಮೂಲಕ ವೀಕ್ಷಿಸಿ ಸಂತೋಷಪಟ್ಟರು . ಭಕ್ತಾದಿಗಳಿಗೆ ಅನ್ನರಾಧನೆ ನಡೆಯಿತು.
ಶ್ರೀ ಕೃಷ್ಣ ಮಠದಲ್ಲಿ, ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಶ್ರೀ ಕೃಷ್ಣ ದೇವರಿಗೆ ವಿಶೇಷವಾಗಿ “ಪಟ್ಟಾಭಿರಾಮ” ದೇವರ ಅಲಂಕಾರ ಮಾಡಿದರು. ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮಹಾಪೂಜೆಯನ್ನು ನೆರವೇರಿಸಿದರು.
ಭಜರಂಗದಳದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.ಭಜರಂಗದಳದ ರಾಜ್ಯ ಸಹಸಂಚಾಲಕ ಸುನಿಲ್ ಕೆ.ಆರ್ ಭಾಗವಹಿಸಿದ್ದರು.ಪರ್ಯಾಯ ಅದಮಾರು ಮಠದ ವ್ಯವಸ್ಥಾಪಕರಾದ ಗೋವಿಂದರಾಜ್ ಇವರು ದೇವರ ಪ್ರಸಾದ ನೀಡಿದರು.
ಅಯೋಧ್ಯ ಶ್ರೀರಾಮಮಂದಿರ ಭೂಮಿಪೂಜೆಯ ಅಂಗವಾಗಿ ಹಿಂದೂ ಜಾಗರಣಾ ವೇದಿಕೆ ಉಡುಪಿ ಇದರ ವತಿಯಿಂದ ಇಂದು ಕುತ್ಪಾಡಿ ಬ್ರಹ್ಮ ವಿಷ್ಣು ಮಹೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ 1992ರ ಕರಸೇವೆಯಲ್ಲಿ ಭಾಗವಹಿಸಿ ಬಾಬ್ರಿ ಮಸೀದಿ ಏರಿದ ಕೆಲವು ಕಾರ್ಯಕರ್ತರಲ್ಲಿ ಒಬ್ಬರಾದ ನಮ್ಮ ಊರಿನ ಹೆಮ್ಮೆಯ ಕರಸೇವಕ ಉಮೇಶ್ ಅಂಬಲಪಾಡಿ ಇವರನ್ನು ಹಿಂದೂ ಜಾಗರಣ ವೇದಿಕೆ ಉಡುಪಿ ಇದರ ವತಿಯಿಂದ ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ದೇವಸ್ಥಾನದ ಆಡಳಿತ ಮೋಕೇಸ್ತರ ಡಾ. ರಾಮಕೃಷ್ಣ ಭಟ್, ಪ್ರಧಾನ ಅರ್ಚಕರಾದ ಬಾಲಕೃಷ್ಣ ಭಟ್, ರಾಧಾಕೃಷ್ಣ ಭಟ್, ಹಿಂದೂ ಜಾಗರಣಾ ವೇದಿಕೆಯ ಉಡುಪಿ ತಾಲೂಕು ಅಧ್ಯಕ್ಷ ರಿಕೇಶ್ ಪೂಜಾರಿ ಕಡೆಕಾರ್, ಯುವ ವಕೀಲ ಶಶಾಂಕ್ ಶಿವತ್ತಾಯ, ವಿಜಯ್ ಭಟ್ ಕಡೆಕಾರ್ ಹಾಗೂ ಹಲವಾರು ಹಿಂದೂ ಕಾರ್ಯಕರ್ತರು ಉಪಸ್ಥಿತರಿದ್ದರು.