ಕೋವಿಡ್ ಕೇಸ್ ಹೆಚ್ಚಳ: ಆಸ್ಪತ್ರೆಗೆ ಸೇರ್ಪಡೆ ಬಗ್ಗೆ ನಮ್ಮ ಗಮನ- ವಿಜ್ಞಾನಿಗಳು

ನವದೆಹಲಿ: ರಾಷ್ಟ್ರ ರಾಜಧಾನಿ ಹಾಗೂ ಸುತ್ತಮುತ್ತ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೂ ಹೊಸ ಅಲೆ ಬಗ್ಗೆ ಆತಂಕಬೇಡ, ಆದರೆ ಆಸ್ಪತ್ರೆಗೆ ಸೇರ್ಪಡೆ ಬಗ್ಗೆ ನಮ್ಮ ಗಮನಹರಿಸಬೇಕಾಗಿದೆ ಎಂದು ಅನೇಕ ವಿಜ್ಞಾನಿಗಳು ಹೇಳಿದ್ದಾರೆ.

ದೆಹಲಿಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೂ ಆಸ್ಪತ್ರೆಗೆ ಸೇರುವವರಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಅಥವಾ ಭಾಗಶ: ಬದಲಾವಣೆಯಾಗಿದೆ ಎಂದು ಅವರು ಹೇಳಿದ್ದಾರೆ.  ಪ್ರಸ್ತುತ  ದೆಹಲಿಯಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾದರೂ ನಾಲ್ಕನೇ ಅಲೆ ಆರಂಭ ಎಂದರ್ಥವಲ್ಲಾ, ಸಾರ್ಸ್ ಕೋವ್-2 ಧೀರ್ಘಕಾಲದಿಂದ ನಮ್ಮೊಂದಿಗೆ ಇದೆ ಎಂದು ಅವರು ಹೇಳಿದ್ದಾರೆ. ದೆಹಲಿಯಲ್ಲಿ ಸೋಮವಾರ 501 ಹೊಸ ಪ್ರಕರಣಗಳೊಂದಿಗೆ ಸೋಂಕಿನ ಪ್ರಮಾಣ ಶೇ. 7.72ಕ್ಕೆ ಏರಿಕೆಯಾಗಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. 

Leave a Reply

Your email address will not be published. Required fields are marked *

error: Content is protected !!