ಜೈಲಿನಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆರೋಪಿಗಳ ಪುಂಡಾಟಿಕೆ
ಶಿವಮೊಗ್ಗ ಎ.18: ಸೆಂಟ್ರಲ್ ಜೈಲಿನಲ್ಲಿ ಇರುವ ಹಿಂದೂ ಸಂಘಟನೆಯ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆರೋಪಿಗಳು ಜೈಲಿನಲ್ಲಿ ಪುಂಡಾಟಿಕೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಜೈಲಿನ ಬ್ಯಾರಕ್ ನಲ್ಲಿ ಇರುವ ಆರೋಪಿಗಳು ಕ್ವಾರಂಟೈನ್ ಸೆಲ್‍ನಿಂದ ಸೆಂಟ್ರಲ್ ಜೈಲಿನ ಒಳಗೆ ಕಳುಹಿಸುವಂತೆ ಆರೋಪಿಗಳು ಜೈಲಿನ ಭದ್ರತಾ ಸಿಬ್ಬಂದಿಗಳಿಗೇ ಅವಾಜ್ ಹಾಕುತ್ತಿದ್ದಾರೆ ಎಂದು ಮಾಧ್ಯಮ ವರದಿಯಲ್ಲಿ ತಿಳಿಸ ಲಾಗಿದೆ. ಹಾಗೂ ಜೈಲಿನ ನಿಯಮಾವಳಿಯಂತೆ 14 ದಿನ ಕ್ವಾರಂಟೈನ್ ಕಡ್ಡಾಯಕ್ಕೆ ಆರೋಪಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ನಮಗೇನು ಕೊರೊನಾ ಇದೆಯಾ? ಒಳಗೆ ಕಳುಹಿಸಿ ಎಂದು ಜೈಲಾಧಿಕಾರಿಗಳನ್ನು ಪ್ರಶ್ನಿಸುತ್ತಿ ದ್ದಾರೆ. ಅಲ್ಲದೆ ಜೈಲಿನಲ್ಲಿರುವ ಟೈಲ್ಸ್ ಕಲ್ಲನ್ನು ಒಡೆದು ಕಲ್ಲಿನ ಚೂರ್‌ನಿಂದ ಕೈ ಕೊಯ್ದುಕೊಂಡು ಹುಚ್ಚಾಟ ನಡೆಸುತ್ತಿದ್ದಾರೆ. ಆರು ಮಂದಿ ಆರೋಪಿಗಳು ಪರಸ್ಪರ ತಮ್ಮಷ್ಟಕ್ಕೆ ಟೈಲ್ಸ್ ಚೂರ್‌ನಿಂದ ಮೈ, ಕೈ ರಕ್ತ ಬರುವಂತೆ ಕೊಯ್ದುಕೊಂಡು ಬೆದರಿಕೆ ಹಾಕಿದ್ದಾರೆ
ಹಾಗೂ ಪ್ರಮುಖ ಆರೋಪಿ ಮಹಮ್ಮದ್ ಖಾಸಿಫ್, ಅಬ್ದುಲ್ ರೋಷನ್ ಸೇರಿ ಆರು ಮಂದಿ ಆರೋಪಿಗಳು ಮೈ, ಕೈ ಕೊಯ್ದುಕೊಂಡಿದ್ದು, ಈ ಬಗ್ಗೆ ತಕ್ಷಣ ಜೈಲಿನ ಆಸ್ಪತ್ರೆ ಸಿಬ್ಬಂದಿಯಿಂದ ಆರು ಮಂದಿ ಆರೋಪಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಸದ್ಯ ಮೂವರು ಆರೋಪಿಗಳನ್ನು ಜೈಲಿನ ಒಳಗೆ ಬ್ಯಾರಕ್‍ಗೆ ಶಿಫ್ಟ್ ಮಾಡಲಾಗಿದ್ದು, ಉಳಿದವರನ್ನು ಪ್ರತ್ಯೇಕವಾಗಿ ಬೇರೆ ಬೇರೆ ಕ್ವಾರಂಟೈನ್ ಸೆಲ್‍ಗೆ ಶಿಫ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಘಟನೆ ಬಳಿಕ ಜೈಲಾಧಿಕಾರಿಗಳು ಕೂಡಲೇ ಪರಪ್ಪನ ಅಗ್ರಹಾರ ಪೊಲೀಸ್ ಸ್ಟೇಷನ್‍ಗೆ ಪ್ರಾಥಮಿಕ ರಿಪೋರ್ಟ್ ನೀಡಿದ್ದಾರೆ ಇನ್ನು ಈ ಆರೋಪಿಗಳನ್ನು ವಿಚಾರಣೆ ಮಾಡಲು ಸಿದ್ಧತೆ ನಡೆಸುತ್ತಿದ್ದು, ಈ ಘಟನೆ ಬಳಿಕ ಆರೋಪಿಗಳ ಭದ್ರತೆಗೆ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಲಾಗಿದ್ದು ಯಾವುದೇ ವಸ್ತು ಸಿಗದಂತೆ ಭದ್ರತಾ ಸಿಬ್ಬಂದಿ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆ. ಕಾರಾಗೃಹ ಇಲಾಖೆಗೂ ಆರೋಪಿಗಳ ನಡವಳಿಕೆ ಮತ್ತು ಘಟನೆ ಬಗ್ಗೆ ಮಾಹಿತಿ ರವಾನೆಯಾಗಿದೆ.
ಈ ಮೊದಲು ಬೆಂಗಳೂರು, ಧಾರವಾಡ, ಬೆಳಗಾವಿ ಮತ್ತು ತುಮಕೂರು ಜೈಲಿನಲ್ಲಿ ಆರೋಪಿಗಳನ್ನು ಇರಿಸಲಾಗಿತ್ತು ಆ ಬಳಿಕ ಇತ್ತೀಚೆಗಷ್ಟೇ ಹತ್ತು ಮಂದಿ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಹತ್ತು ಮಂದಿ ಆರೋಪಿಗಳು ಒಂದೇ ಬ್ಯಾರಕ್‍ನಲ್ಲಿ ಇರಿಸಲಾಗಿತ್ತು. ಈ ನಡುವೆ ಆರೋಪಿಗಳು ಪುಂಡಾಟಿಕೆ ನಡೆಸಿದ್ದಾರೆ ಎಂದು ತಿಳಿಸಲಾಗಿದೆ.