| ಹೊಸದಿಲ್ಲಿ ಎ.18: ಮೇಕ್ ಇನ್ ಇಂಡಿಯಾ ಯೋಜನೆಗೆ ಉತ್ತೇಜನ ನೀಡುವ ಸಲುವಾಗಿ ರಷ್ಯಾ ಜತೆಗೆ ಮಾಡಿಕೊಳ್ಳಲಾಗಿದ್ದ “ಎಂಐ-47 ವಿ 5′ ಮಾದರಿಯ 48 ಹೆಲಿಕಾಪ್ಟರ್‌ಗಳ ಖರೀದಿ ಒಪ್ಪಂದವನ್ನು ಭಾರತೀಯ ವಾಯುಪಡೆ (ಐಎಎಫ್) ರದ್ದುಗೊಳಿಸಿದೆ.
ಹತ್ತು ವರ್ಷಗಳ ಹಿಂದೆ, ಮಧ್ಯಮ ಕ್ರಮಾಂಕದ ಲಿಫ್ಟರ್‌ಗಳಾಗಿರುವ “ಎಂಐ-47 ವಿ 5′ ಮಾದರಿಯ 80 ಹೆಲಿಕಾಪ್ಟರ್‌ಗಳನ್ನು ಖರೀದಿಸುವ ಒಪ್ಪಂದಕ್ಕೆ ಭಾರತ, ರಷ್ಯಾ ಸಹಿ ಹಾಕಿದ್ದವು. ಅವುಗಳಲ್ಲಿ 32 ಹೆಲಿಕಾಪ್ಟರ್‌ಗಳು ಈಗಾಗಲೇ ಭಾರತಕ್ಕೆ ನಾನಾ ಬ್ಯಾಚ್‌ಗಳಲ್ಲಿ ಆಗಮಿಸಿ ಐಎಎಫ್ ಗೆ ಹಸ್ತಾಂತರಗೊಂಡಿವೆ. ಈ ಹೆಲಿಕಾಪ್ಟರ್‌ಗಳನ್ನು ದೇಶೀಯವಾಗಿಯೇ ತಯಾರಿಸಲು ಕೇಂದ್ರ ಉದ್ದೇಶಿಸಿರುವುದರಿಂದ ಇನ್ನುಳಿದ 48 ಹೆಲಿಕಾಪ್ಟರ್‌ಗಳ ಖರೀದಿ ಪ್ರಕ್ರಿಯೆಯನ್ನು ನಿಲ್ಲಿಸಲು ಐಎಎಫ್ ಉದ್ದೇಶಿಸಿದೆ.
ಮೇಕ್ ಇನ್ ಇಂಡಿಯ’ ಯೋಜನೆಯಡಿ, ಭಾರತದ ರಕ್ಷಣ ಪರಿಕರ ಉತ್ಪಾದನ ವಲಯವನ್ನು ಸಂಪೂರ್ಣವಾಗಿ ಸ್ವಾವಲಂಬಿಯಾಗಿಸುವುದು ಇದರ ಉದ್ದೇಶವಾಗಿದೆ ಎಂದು ತಿಳಿದು ಬಂದಿದೆ
| |