ಮಂಗಳೂರು ವಿಶೇಷ ಆರ್ಥಿಕ ವಲಯ: ವಿಷ ಅನಿಲ ಸೋರಿಕೆ- ಮೂವರ ಮೃತ್ಯು, ಐವರು ಗಂಭೀರ
ಮಂಗಳೂರು: ವಿಶೇಷ ಆರ್ಥಿಕ ವಲಯದ ಮೀನಿನ ಫ್ಯಾಕ್ಟರಿಯೊಂದರಲ್ಲಿ ಭಾನುವಾರ ರಾತ್ರಿ ದುರಂತ ಸಂಭವಿಸಿದ್ದು ಪರಿಣಾಮ ಮೂವರು ಮೃತಪಟ್ಟ ಮತ್ತು ಐವರು ಗಂಭೀರವಾಗಿ ಅಸ್ವಸ್ಥಗೊಂಡ ಘಟನೆ ಬೆಳಕಿಗೆ ಬಂದಿದೆ .
ಹಲವೆಡೆಗಳಿಂದ ಬರುವ ಮೀನು ಶುದ್ದೀಕರಿಸುವ ಬೃಹತ್ ಟ್ಯಾಂಕಿಗೆ ಇಳಿದ ಬಂಗಾಳದ ಮೂವರು ಕಾರ್ಮಿಕರು ಮೃತಪಟ್ಟರೆ ಐವರು ಕಾರ್ಮಿಕರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೃತಪಟ್ಟ ಕಾರ್ಮಿಕರನ್ನು ಪಶ್ಚಿಮ ಬಂಗಾಳ ಮೂಲದ ಸಮೀರುಲ್ಲಾ ಇಸ್ಲಾಂ, ಉಮರ್ ಫಾರೂಕ್, ನಿಝಾಮುದ್ದೀನ್ ಎಂದು ಗುರುತಿಸಲಾಗಿದೆ. ಶರಪ್ ಅಲಿ, ಮೀರಾದುಲ್ಲಾ ಇಸ್ಲಾಂ ಗಂಭೀರವಾಗಿ ಗಾಯ ಗೊಂಡವರಾಗಿದ್ದಾರೆ. ಪ್ರತಿನಿತ್ಯದಂತೆ ಮೀನು ಶುದ್ದೀಕರಣಗೊಳಿಸುವ ಟ್ಯಾಂಕಿಗೆ ಇಳಿದ 8 ಮಂದಿ ಕಾರ್ಮಿಕರು ಸ್ವಚ್ಚಗೊಳಿಸಿದ ಮೀನನ್ನು ತೆಗೆಯುವ ಸಂದರ್ಭ ಈ ದುರಂತ ಸಂಭವಿಸಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಸದ್ಯ ಸಂಸ್ಕರಣ ಘಟಕವನ್ನು ಮುಚ್ಚಲಾಗಿದೆ.