ಉಡುಪಿ: ಪ್ರತ್ಯೇಕ ಪ್ರಕರಣ ಇಬ್ಬರು ನೇಣಿಗೆ ಶರಣು

ಉಡುಪಿ, ಎ.17 (ಉಡುಪಿ ಟೈಮ್ಸ್ ವರದಿ): ಶಿರ್ವ ಹಾಗೂ ಶಂಕರನಾರಾಯಣದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ವ್ಯಕ್ತಿಗಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಎ.7 ರಂದು ಬೆಂಗಳೂರಿನ ಬಿಡದಿಯ ಹೊಟೇಲ್ ನಿಂದ ನಾಪತ್ತೆಯಾಗಿದ್ದ, ಹೊಟೇಲ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಕುಂದಾಪುರದ ಉಳ್ಳೂರಿನ  ನಾರಾಯಣ ಶೆಟ್ಟಿ(52) ಅವರು ಎ.16 ರಂದು ಕುಂದಾಪುರದ ಸೂರಾಲು ಕಾಡಿನಲ್ಲಿ ವೈಯುಕ್ತಿಕ ಕಾರಣದಿಂದ ಮನನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಮೃತರ ಪತ್ನಿ ನೀಡಿದ ಮಾಹಿತಿಯಂತೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದೆಡೆ ಕಾಪುವಿನ ಕುತ್ಯಾರುವಿನಲ್ಲಿ ಸಂತೋಷ (37) ಅವರು ಯಾವುದೋ ಸಮಸ್ಯೆಯಿಂದ ಜೀವನದಲ್ಲಿ ಮನನೊಂದು ಕುತ್ಯಾರುವಿನ ಸಾಧು ಮೂಲ್ಯ ಎಂಬವರ ಖಾಲಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿಕೊಂಡಿದ್ದಾರೆ. ಈ ಬಗ್ಗೆ ಮೃತರ ಅಕ್ಕ ನೀಡಿದ ಮಾಹಿತಿಯಂತೆ ಶಿರ್ವಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಯೊಂದೇ ಪರಿಹಾರವಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವನೀಯ ವ್ಯಕ್ತಿಗಳ ಗಮನಕ್ಕೆ, ಸಹಾಯವಾಣಿ ನಂಬರ್ : 080 2572 2573, ಸಮರ್ಥನಂ ಆವರಣ, 15ನೇ ಕ್ರಾಸ್, ಹೆಚ್‍ಎಸ್‍ಆರ್ ಸೆಕ್ಟರ್- 4, ಬೆಂಗಳೂರು.

Leave a Reply

Your email address will not be published. Required fields are marked *

error: Content is protected !!