ಇನ್ನು ಮುಂದೆ ವಿವಾಹ ನೋಂದಣಿ ಅಧಿಕಾರ ಪಿಡಿಓಗೂ ಇದೆ
ಬೆಂಗಳೂರು ಎ.17: ರಾಜ್ಯದಲ್ಲಿ ಇನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಪಂಚಾಯತ್ ಮಟ್ಟದಲ್ಲಿ ವಿವಾಹ ನೋಂದಣಿ ಮಾಡಬಹುದಾಗಿದೆ.
ಈ ಬಗ್ಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ವಿವಾಹ ನೋಂದಣಾಧಿಕಾರಿಯಾಗಿ ನೇಮಿಸಿ ಅಧಿಸೂಚನೆ ಹೊರಡಿಸಿದೆ. ಅದರಂತೆ ಗ್ರಾಮಪಂಚಾಯತ್ ಗಳು ಜನನ ಮತ್ತು ಮರಣ ನೋಂದಣಿಯ ಜತೆಗೆ ವಿವಾಹ ನೋಂದಣಿಯನ್ನೂ ಮಾಡಬಹುದಾಗಿದೆ ಎಂದು ತಿಳಿಸಲಾಗಿದೆ. ಈ ಮೊದಲು ಪಿಡಿಒಗಳಿಗೆ ಜನನ ಮತ್ತು ಮರಣವನ್ನು ನೋಂದಣಿ ಮಾಡಲು ಅವಕಾಶ ನೀಡಲಾಗಿತ್ತು ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್) ಎಲ್.ಕೆ.ಅತೀಕ್ ಹೇಳಿದ್ದಾರೆ.