ಉಡುಪಿ: ಬಿಜೆಪಿಯಿಂದ ವಿತ್ತೀಯ ಸಮಾವೇಶ ಗೌರವ ದಿವಸ್
ಉಡುಪಿ: ಜಿಲ್ಲಾ ಬಿಜೆಪಿ, ಆರ್ಥಿಕ, ವಾಣಿಜ್ಯ, ವ್ಯಾಪಾರ, ಕೈಗಾರಿಕಾ ಮತ್ತು ಸಹಕಾರ ಪ್ರಕೋಷ್ಠಗಳ ಜಂಟಿ ಸಹಯೋಗದಿಂದ ಬಿಜೆಪಿ ಕಾಪು ಮಂಡಲದ ಆಶ್ರಯದಲ್ಲಿ ‘ವಿತ್ತೀಯ ಸಮಾವೇಶ ಗೌರವ ದಿವಸ’ದನ್ವಯ ಸಾಮಾನ್ಯ ಕೇಂದ್ರಗಳ ಸಂಪರ್ಕ ಕಾರ್ಯಕ್ರಮವು ಅಲೆವೂರು ರಾಮಪುರ ಗ್ರಾಮ ವನ್ ಸೇವಾ ಕೇಂದ್ರದಲ್ಲಿ ನಡೆಯಿತು.
ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪೆರ್ಣಂಕಿಲ ಶ್ರೀಶ ನಾಯಕ್ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಜನಪರ ಯೋಜನೆಗಳಾದ ಆಯುಷ್ಮಾನ್ ಭಾರತ್, ಜನದನ್, ಕಿಸಾನ್ ಸಮ್ಮಾನ್, ಕೋವಿಡ್ ಲಸಿಕೆ, ಗರೀಬ್ ಕಲ್ಯಾಣ ಅನ್ನ ಯೋಜನೆ, ಈಶ್ರಮ್ ಕಾರ್ಡ್, ಪೋಷಣ್ ಅಭಿಯಾನ, ಮುಂತಾದವುಗಳ ಬಗ್ಗೆ ವಿಸ್ತೃತ ಮಾಹಿತಿಯನ್ನು ನೀಡಿದರು. ಬಿಜೆಪಿ ಕಾಪು ಮಂಡಲಾಧ್ಯಕ್ಷ ಶ್ರೀಕಾಂತ ನಾಯಕ್ ಗ್ರಾಮ ವನ್ ಕೇಂದ್ರದಲ್ಲಿ ದೊರೆಯುವ ವಿವಿಧ ಸೇವಾ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಫಲಾನುಭವಿಗಳ ಪ್ರಕೋಷ್ಠದ ಸಮಿತಿ ಸದಸ್ಯ ಅಂಡಾರು ದೇವಿಪ್ರಸಾದ್ ಶೆಟ್ಟಿ, ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದಾವೂದ್ ಅಬೂಬಕ್ಕರ್, ಜಿಲ್ಲಾ ಆರ್ಥಿಕ ಪ್ರಕೋಷ್ಠದ ಸಂಚಾಲಕ ದಿವಾಕರ ಶೆಟ್ಟಿ, ಬಿಜೆಪಿ ಕಾಪು ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ಶೆಟ್ಟಿ ಮಾಂಬೆಟ್ಟು, ಗೋಪಾಲಕೃಷ್ಣ ರಾವ್ ಮುಂತಾದವರು ಉಪಸ್ಥಿತರಿದ್ದರು. ಫಲಾನುಭವಿಗಳಿಗೆ ಉಚಿತವಾಗಿ ಆಯುಷ್ಮಾನ್ ಕಾರ್ಡ್ ಮತ್ತು ಈಶ್ರಮ್ ಕಾರ್ಡ್ಗಳನ್ನು ವಿತರಿಸಲಾಯಿತು ಹಾಗೂ ಬ್ಯಾಂಕ್ ನೆರವಿನೊಂದಿಗೆ ಜನದನ್ ಖಾತೆಗೆ ಹೆಸರುಗಳನ್ನು ನೊಂದಾಯಿಸಲಾಯಿತು.