ಪ್ರಮೋದ್ ಮಧ್ವರಾಜ್ ಪಕ್ಷದಲ್ಲಿ ಉಳಿಯಲು ಇನ್ನು ಹಲವು ಬೇಡಿಕೆ ಇಟ್ಟಿದ್ದಾರೆ- ಮಾಜಿ ಡಿಸಿಎಂ ಪರಮೇಶ್ವರ್
ಉಡುಪಿ: ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಡಿಸಿಎಂ ಪರಮೇಶ್ವರ್, ಪ್ರಮೋದ್ ಮಧುರಾಜ್ ಬಿಜೆಪಿ ಸೇರ್ಪಡೆ ಆಗುತ್ತಾರೆ ಅನಿಸುವುದಿಲ್ಲ. ಅವರ ಜೊತೆ ಮಾತನಾಡಿ ಬಂದಿದ್ದೇನೆ. ಅವರ ಕೆಲವು ಬೇಡಿಕೆಗಳು, ಅನಿಸಿಕೆಗಳನ್ನೆಲ್ಲ ಸರಿಪಡಿಸಿಕೊಳ್ಳುತ್ತೇವೆ ಎಂದು ಉಡುಪಿಯಲ್ಲಿ ಹೇಳಿದ್ದಾರೆ.
ಕೆಪಿಸಿಸಿ ಉಪಾಧ್ಯಕ್ಷ ಹುದ್ದೆ ನೀಡಿದರೂ ಪಕ್ಷ ಸಂಘಟನೆ, ಪಕ್ಷದ ಕಾರ್ಯಕ್ರಮಗಳಿಗೆ ಭಾಗವಹಿಸದೆ ದೂರು ಉಳಿದಿದ್ದಾರೆ. ಮಾತ್ರವಲ್ಲದೆ, ಇಂದು ಕೆಪಿಸಿಸಿ ಜಿಲ್ಲಾ ಮಟ್ಟದಲ್ಲಿ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆಗೆ ಸೂಚಿಸಿತ್ತು. ಈ ಪ್ರತಿಭಟನಾ ಸಭೆಗೂ ಗೈರಾಗುವ ಮೂಲಕ ಇನ್ನೂ ತನಗೆ ಪಕ್ಷದ ವಿರುದ್ದ ಅಸಮಾಧಾನ ಇದೆ ಎಂದು ತೋರಿಸಿದಂತಿತ್ತು.
ಇನ್ನು ಜಾತಿಯ ಕಾರಣಕ್ಕೆ ಅವಮಾನ ಎದುರಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಾಲ್ಯದಿಂದಲೂ ತಾರತಮ್ಯ ಅನುಭವಿಸಿಕೊಂಡು ಬಂದಿದ್ದೇವೆ. ಈ ವಿಚಾರದಲ್ಲಿ ಜನರ ಮನಸ್ಸು ಬದಲಾವಣೆಯಾಗಬೇಕೇ ಹೊರತು ಇದನ್ನು ಕಾನೂನಿಂದ ಸರಿಪಡಿಸಲು ಸಾಧ್ಯವಿಲ್ಲ. ಹಿಂದೆಲ್ಲಾ ನಾನು ಶಾಸಕನಾಗಿದ್ದಾಗ, ಸಚಿವನಾಗಿದ್ದಾಗ ನಡೆದ ಘಟನೆಗಳ ಕಾರಣಕ್ಕೆ ಹೇಳಿದ್ದೆ. ಅದನ್ನು ನನ್ನಂಥವರು ಹೇಳದೆ ಮತ್ಯಾರು ಹೇಳಬೇಕು?. 21ನೇ ಶತಮಾನದಲ್ಲಾದರೂ ಬದಲಾವಣೆಯಾಗಲಿ ಅನ್ನುವ ಉದ್ದೇಶದಿಂದ ಹೇಳಿದ್ದೇನೆ ಎಂದರು.