ಗಂಗೊಳ್ಳಿ: ಮನೆಯ ದಾರಿಯ ವಿಚಾರ- ಅಪ್ರಾಪ್ತ ಬಾಲಕನಿಗೆ ಹಲ್ಲೆ

ಗಂಗೊಳ್ಳಿ ಎ.16 (ಉಡುಪಿ ಟೈಮ್ಸ್ ವರದಿ): ಮನೆಯ ದಾರಿಯ ವಿಚಾರದಲ್ಲಿ ಉಂಟಾಗಿರುವ ತಕರಾರಿನ ದ್ವೇಷದಿಂದ ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನಿಗೆ ಮೇಲೆ ಹಲ್ಲೆ ನಡೆಸಿರುವ ಕುರಿತು ಗಂಗೊಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಗುಜ್ಜಾಡಿಯ ಉಮಾ ಗಾಣಿಗ ಎಂಬವರ ಮಗ ರಜತ್ (15) ಹಾಗೂ ಗಂಡನ ಅಣ್ಣನ ಮಗ ಸನತ್ ರವರು ಎ.12 ರಂದು  ಸೈಕಲ್ ನಲ್ಲಿ ಕೊಡಪಾಡಿ ಪೇಟೆಗೆ ಹೋಗುತ್ತಿದ್ದ ವೇಳೆ ಗುಜ್ಜಾಡಿಯ ಗ್ರಾಮದ ಕೊಡಪಾಡಿ ಭಾಸ್ಕರ ಗಾಣಿಗರವರ ಮನೆಯ ಬಳಿ ತಲುಪುವಾಗ ಅಲ್ಲಿನ ದೇವೇಂದ್ರ, ದೇವಕಿ, ಅದ್ವಿತ್ ಹಾಗೂ ಅವನಿ ಎಂಬವರು ರಜತ್ ಹಾಗೂ ಸನತ್ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಈ ರಸ್ತೆಯಲ್ಲಿ ತಿರುಗಾಡಬೇಡಿ ಎಂದು ಹೇಳಿ ಹೊಡೆದು ಹಲ್ಲೆ ನಡೆಸಿದ್ದಾರೆ. ಮಾತ್ರವಲ್ಲದೆ ಇನ್ನು ಮುಂದಕ್ಕೆ ಈ ರಸ್ತೆಯಲ್ಲಿ ತಿರುಗಾಡಿದರೆ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿರುತ್ತಾರೆ ಎಂದು‌ ದೂರಿನಲ್ಲಿ ತಿಳಿಸಲಾಗಿದೆ.
ಹಾಗೂ ಉಮಾ ಗಾಣಿಗ ಹಾಗೂ ಆಪಾದಿತರಿಗೂ ಮನೆಯ ದಾರಿಯ ವಿಚಾರದಲ್ಲಿ ತಕರಾರು ಇದ್ದು ಅದೇ ದ್ವೇಷದಿಂದ ಇವರ ಮಗನ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!