| ಉಡುಪಿ ಎ.16 (ಉಡುಪಿ ಟೈಮ್ಸ್ ವರದಿ): ಅನಾರೋಗ್ಯದಿಂದ ಬಳಲುತ್ತಿದ್ದ ಅಣ್ಣನನ್ನು ನೋಡಲು ಮಹಾರಾಷ್ಟ್ರಕ್ಕೆ ಹೋಗಿದ್ದ ಉದ್ಯಾವರ ಗ್ರಾಮದ ಪಿತ್ರೋಡಿಯ ರಾಮ ತಿಂಗಳಾಯ ಅವರು ಅಲ್ಲಿಂದ ರೈಲಿನಲ್ಲಿ ಹೊರಟು ವಾಪಸ್ಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.
ಎ.3 ರಂದು ಉಡುಪಿಯಿಂದ ತಮ್ಮ ಅಣ್ಣನನ್ನು ನೋಡಲು ರಾಮ ತಿಂಗಳಾಯ ಅವರು ಮಹಾರಾಷ್ಟ್ರ ಕ್ಕೆ ಹೋಗಿದ್ದರು. ಬಳಿಕ ಎ.8 ರಂದು ರಾತ್ರಿ ಮಹಾರಾಷ್ಟ್ರದ ಚಿಪ್ಲುನ್ ರೈಲ್ವೆ ನಿಲ್ದಾಣದಲ್ಲಿ ಮತ್ಸ್ಯಗಂಧ ರೈಲಿನಲ್ಲಿ ವಾಪಸ್ಸು ಉಡುಪಿಗೆ ಹೊರಟಿದ್ದರು.
ಆದರೆ ಎ.9 ರಂದು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಉಡುಪಿಯಲ್ಲಿ ತಂದೆಯ ಬರುವಿಕೆಗಾಗಿ ಮಗ ಮಹೇಂದ್ರ ಮತ್ತು ಆತನ ಸ್ನೇಹಿತರು ಉಡುಪಿ ರೈಲ್ವೆ ನಿಲ್ದಾಣದಲ್ಲಿ ರಾತ್ರಿ 11.30 ರ ವರೆಗೂ ಕಾದಿದ್ದಾರೆ. ಆದರೆ ರಾಮ ತಿಂಗಳಾಯ ಅವರು ಬಾರದ ಹಿನ್ನೆಲೆಯಲ್ಲಿ ಎ.10 ರಂದು ಮಹಾರಾಷ್ಟ್ರ ದಲ್ಲಿದ್ದ ರಾಮ ತಿಂಗಳಾಯ ಅವರ ಅಣ್ಣಾ ಗಣೇಶ್ ತಿಂಗಳಾಯ ಅವರ ಸ್ನೇಹಿತರು ಅಲ್ಲಿನ ರೈಲ್ವೆ ನಿಲ್ದಾಣದಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಬಳಿಕ ಮಾರನೆ ದಿನ ಉಡುಪಿ ರೈಲ್ವೆ ನಿಲ್ದಾಣದಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಯಿತು.
ಈ ಬಗ್ಗೆ ಮಹಾರಾಷ್ಟ್ರದ ರೈಲ್ವೆ ನಿಲ್ದಾಣದ ಸಿಸಿಟಿವಿ ಪರಿಶೀಲಿಸಿದಾಗ ರಾಮ ತಿಂಗಳಾಯ ಅವರು ರೈಲು ಹತ್ತಿರುವುದು ಕಂಡು ಬಂದಿದೆ. ಬಳಿಕ ಗೋವಾ , ಮಡಗಾಂವ್ ಮತ್ತು ಚಿಪ್ಲುನ್ ನ ಮಧ್ಯದ ಎರಡು ರೈಲ್ವೆ ನಿಲ್ದಾನಗಳ ಸಿಸಿಟಿವಿ ಪರಿಶೀಲಿಸಿದಾಗ ಎಲ್ಲಿಯೂ ಇಳಿದಿದ್ದು ಪತ್ತೆಯಾಗಿಲ್ಲ. ಇದರ ಜೊತೆಗೆ ಮುರುಡೇಶ್ವರ, ಭಟ್ಕಳ, ಬೈಂದೂರು ನಿಲ್ದಾಣದಗಳ ಸಿಸಿಟಿವಿ ಚೆಕ್ ಮಾಡಲಾಗಿದ್ದು, ಎಲ್ಲಿಯೂ ರಾಮ ತಿಂಗಳಾಯ ಅವರು ಇಳಿದಿದ್ದು ಕಂಡು ಬಂದಿಲ್ಲ. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
| |