ಬ್ರಹ್ಮಾವರ: ಸ್ಪೋರ್ಟ್ಸ್ ಕ್ಲಬ್’ನ ತರಬೇತುದಾರ ನೇಣಿಗೆ ಶರಣು
ಬ್ರಹ್ಮಾವರ ಎ.16(ಉಡುಪಿ ಟೈಮ್ಸ್ ವರದಿ): ಇಲ್ಲಿನ ಸ್ಪೋರ್ಟ್ಸ್ ಕ್ಲಬ್ ಈಜುಗಾರ ತರಬೇತುದಾರನಾಗಿದ್ದ ಮಂಜುನಾಥ ಮಜಳ್ಕರ್ ಎಂಬವರು ಸ್ಪೋರ್ಟ್ಸ್ ಕ್ಲಬ್ ನ ಗ್ರೀನ್ ರೂಮಿನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರವಾರ ಮೂಲದ ಮಂಜುನಾಥ ಮಜಳ್ಕರ್ರವರು ಕಳೆದ 4 ತಿಂಗಳಿನಿಂದ ಬ್ರಹ್ಮಾವರ ಸ್ಪೋಟ್ಸ್ ಕ್ಲಬ್ನ್ನಲ್ಲಿ ಈಜುಗಾರ ತರಬೇತಿಗಾರನಾಗಿ ಕೆಲಸ ಮಾಡಿಕೊಂಡಿದ್ದರು. ನಿನ್ನೆ ಮಧ್ಯಾಹ್ನದ ವೇಳೆ ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಸ್ಪೋಟ್ಸ್ ಕ್ಲಬ್ ನ ಗ್ರೀನ್ ರೂಮ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮೃತರ ಅಣ್ಣಾ ನೀಡಿದ ಮಾಹಿತಿಯಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.