ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಲಾಡ್ಜ್ ಮಾಲೀಕ ಬಿಚ್ಚಿಟ್ಟ ಮಾಹಿತಿ ಏನು ಗೊತ್ತೇ..?
ಉಡುಪಿ ಎ.15(ಉಡುಪಿ ಟೈಮ್ಸ್ ವರದಿ): ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಗರದ ಶಾಂಭವಿ ಲಾಡ್ಜ್ ನ ದಿನೇಶ್ ಎಂಬವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿ ಅವರು, ಎ.11 ರಂದು ಸಂಜೆ ವೇಳೆಗೆ ಸಂತೋಷ್ ಪಾಟೀಲ್ ಹಾಗೂ ಅವರ ಸ್ನೇಹಿತರು ರೂಮ್ ಕೇಳಿದಾಗ ಲಾಡ್ಜ್ ನ ಪ್ರಕ್ರಿಯೆ ಯಂತೆ ಗುರುತಿನ ಚೀಟಿ, ಸಹಿ ಪಡೆದು ರೂಮ್ ನೀಡಿದೆವು. ಮರು ದಿನ ಬೆಳಿಗ್ಗೆ 10.50 ರ ವೇಳೆಗೆ ಸಂತೋಷ್ ಪಾಟೀಲ್ ಅವರ ಇಬ್ಬರು ಸ್ನೇಹಿತರು ಬಂದು ಸಂತೋಷ್ ಅವರು ಬಾಗಿಲು ತೆಗೆಯುತ್ತಿಲ್ಲ. ಕಾಲ್ ರಿಸೀವ್ ಮಾಡುತ್ತಿಲ್ಲ ಏನಾಗಿದೆ ಗೊತ್ತಿಲ್ಲ ಎಂದಿದ್ದರು. ಆದ್ದರಿಂದ ರೂಮ್ ನ ಡೂಬ್ಲಿಕೇಟ್ ಕೀ ಬಳಸಿ ಬಾಗಿಲು ತೆರೆದು ನೋಡಿದಾಗ ಅವರು ಮೃತಪಟ್ಟಿರುವುದು ತಿಳಿದು ಬಂದಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಬಂದು ಪ್ರಕ್ರಿಯೆ ಮುಗಿಸಿದ್ದಾರೆ. ಹಾಗೂ ಅವರಿಗೆ ಸಂಬಂಧಿಸಿದ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದರು.
ಸಂತೋಷ್ ಪಾಟೀಲ್ ಅವರ ಐಡಿ ಯಲ್ಲಿ ಹಿಂಡಲಗಾ ಎಂದು ಇತ್ತು ಈ ಬಗ್ಗೆ ನಾವು ಹೆಚ್ಚು ಗಮನ ನೀಡಿರಲಿಲ್ಲ ಅವರು ಬರುವಾಗ ಕೈಯಲ್ಲಿ ಎರಡು ಚೀಲ ಇದ್ದು ಜ್ಯೂಸ್ ತಂದಿರುವ ಹಾಗಿತ್ತು. ಸದ್ಯ ಸಂತೋಷ್ ಪಾಟೀಲ್ ಅವರು ಆತ್ಮಹತ್ಯೆ ಮಾಡಿಕೊಂಡ ರೂಂ ಇವರು ಮೂರನೇ ಮಳಿಗೆಯನ್ನು ಸಂಪೂರ್ಣ ಲಾಕ್ ಮಾಡಲಾಗಿದೆ. ಈಗಾಗಲೇ ಬುಕ್ ಆಗಿರುವ ಕಸ್ಟಮರ್ ಗಳು ಬರುತ್ತಿದ್ದಾರೆ. ಆದರೆ ಘಟನೆಯಿಂದ ಹೋಟೆಲ್ ಬಗ್ಗೆ ಎಲ್ಲಾ ಕಡೆ ಪ್ರಚಾರ ಆಗಿರುವುದರಿಂದ ಬದುಕುವುದೇ ಕಷ್ಟ ಅನ್ನೋ ರೀತಿ ಆಗಿದೆ. ಸದ್ಯ ಎರಡನೇ ಮಳಿಗೆ ವರೆಗೆ ಮಾತ್ರ ಈಗ ರೂಮ್ ನೀಡಲಾಗುತ್ತಿದ್ದು, ಸಂಪೂರ್ಣ ಸ್ವಚ್ಛ ಹಾಗೂ ಪೂಜೆ ಬಳಿಕ 15 ದಿನಗಳ ನಂತರ ಮೂರನೇ ಮಳಿಗೆಯನ್ನು ತೆರೆಯಲಾಗುತ್ತದೆ ಎಂದರು.