ಬೆಂಗಳೂರಿನಲ್ಲಿ 2 ಸಿಡಿ ತಯಾರಿಕಾ ಕಾರ್ಖಾನೆ- ಹೊಸ ಬಾಂಬ್ ಸಿಡಿಸಿದ ಯತ್ನಾಳ್

ಬೆಂಗಳೂರು, ಏ 15: ಬೆಂಗಳೂರಿನಲ್ಲಿ ಎರಡು ಸಿಡಿ ಕಾರ್ಖಾನೆಗಳಿದ್ದು, ಅಲ್ಲಿ ಸಿಡಿ ತಯಾರಿಸಿ. ಆ ಬಳಿಕ ಸಿಡಿಯನ್ನು ಬಳಸಿಕೊಂಡು ಬ್ಲಾಕ್‌ ಮೇಲ್‌ ಮಾಡುತ್ತಾರೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಸಿಡಿ ಕಾರ್ಖಾನೆಗಳು ಬೆಂಗಳೂರಿನಲ್ಲಿದ್ದು, ಅಲ್ಲಿ ಸಿಡಿ ತಯಾರಿಸಿ ಬಳಿಕ ಸಿಡಿಯನ್ನು ಬಳಸಿಕೊಂಡು ಬ್ಲಾಕ್‌ ಮೇಲ್‌ ಮಾಡುತ್ತಾರೆ ಅಂತದೊಂದು ತಂಡವೇ ಕಾರ್ಯ ನಿರ್ವಹಿಸುತ್ತಿದೆ ಎಂದಿದ್ದಾರೆ.

ಇನ್ನು ಈಶ್ವರಪ್ಪ ಸ್ವಯಂ ಪ್ರೇರಿತರಾಗಿ ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದು, ಈಶ್ವರಪ್ಪ ಈ ಪ್ರಕರಣದಲ್ಲಿ ನಿರ್ದೋಷಿಯಾಗಿ ಹೊರ ಬರುವ ವಿಶ್ವಾಸವಿದೆ, ಮಹಾ ಕಳ್ಳ ಮತ್ತು ನಮ್ಮಲ್ಲಿರುವ ಕಳ್ಳ ರಾಜೀನಾಮೆ ನೀಡುವಂತಹ ಷಡ್ಯಂತ್ರಗಳನ್ನು ಸೃಷ್ಟಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!