ಉಡುಪಿ: ಮತ್ತೆ ಐದು ಮಂದಿಗೆ ಸೋಂಕು, ಗರಡಿಮಜಲು ಪೊಲೀಸ್ ಕ್ವಾಟ್ರಸ್ ಸಿಲ್ ಡೌನ್!
ಉಡುಪಿ: ಸಂಜೆ ಮತ್ತೆ ಐದು ಕೊರೋನಾ ಸೋಂಕಿತರ ಪ್ರಕರಣ ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಒಂದೇ ದಿನ 23 ಹೊಸ ಪ್ರಕರಣಗಳಾಗಿವೆ. ಇದರಿಂದ ಜಿಲ್ಲೆಯಲ್ಲಿ ಒಟ್ಟು ಸೋಂಕಿತರು 76 ಕ್ಕೆ ಏರಿಕೆಯಾಗಿದೆ.
ಅಜೆಕಾರು ಪೊಲೀಸ್ ಠಾಣೆಯ ಎಎಸ್ ಐ ಅವರಿಗೆ ಸೋಂಕು ದೃಢವಾದ ಹಿನ್ನಲೆಯಲ್ಲಿ ತೆಂಕನಿಡಿಯೂರು ಗ್ರಾಮದ ಗರಡಿಮಜಲು ಎಂಬಲ್ಲಿನ ಎರಡು ಪೊಲೀಸ್ ಕ್ವಾಟ್ರಸ್ ಗಳನ್ನು ಸೀಲ್ ಡೌನ್ ಮಾಡಲಾಗಿದ್ದು, ಈ ಪ್ರದೇಶವನ್ನು ಕಂಟೈನ್ ಮೆಂಟ್ ಏರಿಯಾವನ್ನಾಗಿ ಮಾಡಲಾಗಿದೆ.
ಮೂವರು ಪೊಲೀಸರಿಗೆ ಕೋರೊನಾ ಪಾಸಿಟಿವ್ ಬಂದಿರುವ ಹಿನ್ನಲೆಯಲ್ಲಿ ಅಜೆಕಾರು, ಕಾರ್ಕಳ ಮತ್ತು ಬ್ರಹ್ಮಾವರ ಪೊಲೀಸ್ ಠಾಣೆಗಳನ್ನು ಸ್ಯಾನಿಟೈಜ್ ಮಾಡುವ ಉದ್ದೇಶದಿಂದ ಕ್ಲೋಸ್ ಡೌನ್ ಮಾಡಲಾಗಿದೆ.
ಈ ಮೂರು ಠಾಣೆಗಳ ಕಾರ್ಯನಿರ್ವಹಣೆಗೆ ಬದಲಿ ವ್ಯವಸ್ಥೆ ಮಾಡಿಲಾಗಿದ್ದು,ಅದರಂತೆ ಅಜೆಕಾರಿನ ಠಾಣೆಯು ಪಕ್ಕದ ಅಂಗನವಾಡಿಯಲ್ಲಿ, ಕಾರ್ಕಳ ಠಾಣೆ ಪುರಸಭೆ ಕಟ್ಟಡಕ್ಕೆ ,ಬ್ರಹ್ಮಾವರ ಠಾಣೆ ಈಗ ಇರುವ ಠಾಣೆಯ ಹಿಂದಿನ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದೆ.