ಉಡುಪಿ: ಆಚಾರ್ಯಾಸ್ ಏಸ್ 10ನೇ ತರಗತಿ ವೆಕೇಷನ್ ಬ್ಯಾಚ್ ಶುಭಾರಂಭ
ಉಡುಪಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ಆಯೋಜಿಸಿ ಗರಿಷ್ಠ ಫಲಿತಾಂಶವನ್ನು ಗಳಿಸುತ್ತಿರುವ ಉಡುಪಿಯ ಆಚಾರ್ಯಾಸ್ ಏಸ್ ನಲ್ಲಿ ಹತ್ತನೇ ತರಗತಿ, ವಿದ್ಯಾರ್ಥಿಗಳಿಗೆ ರಜಾದಿನದ ಶೈಕ್ಷಣಿಕ ತರಬೇತಿಯು ಶುಭಾರಂಭಗೊಂಡಿತು.
ಒಂಬತ್ತನೇ ತರಗತಿ ಪೂರೈಸಿ 10ನೇ ತರಗತಿಗೆ ಪಾದಾರ್ಪಣೆಗೈಯುತ್ತಿರುವ ವಿದ್ಯಾರ್ಥಿಗಳಿಗೆ ಫಿಸಿಕ್ಸ್, ಕೆಮಿಸ್ಟ್ರಿ, ಬಯಾಲಜಿ ಹಾಗೂ ಮ್ಯಾತ್ಸ್ ವಿಷಯವಾಗಿ ನಿರಂತರ ಒಂದುವರ್ಷಗಳ ಕಾಲ ಜರಗಲಿರುವ ತರಬೇತಿಯನ್ನು ದೀಪ ಬೆಳಗಿಸಿ ಏಸ್ ಸಂಸ್ಥೆಯ ಪ್ರಾಂಗಣದಲ್ಲಿ ಶುಭಾರಂಭಗೊಳಿಸಲಾಯಿತು. ಸಂಸ್ಥೆಯ ಶ್ರೀ ಪ್ರಹ್ಲಾದ ಆಚಾರ್ಯ, ಗೀತಾ ಆಚಾರ್ಯ, ಶ್ರೀನಿವಾಸ ಆಚಾರ್ಯ, ರಘೋತ್ತಮ ಶ್ರೀಪಾದರಾಜರು ದೀಪ ಬೆಳಗಿಸಿ ವಿದ್ಯಾರ್ಥಿ ಸಮುದಾಯ ಹಾಗೂ ಸಂಸ್ಥೆಗೆ ಶುಭ ಹಾರೈಸಿದರು.
ಸಾಂದರ್ಭಿಕವಾಗಿ ಮಾತನಾಡಿದ ಪಿ. ಶ್ರೀನಿವಾಸ ಆಚಾರ್ಯರು ವಿದ್ಯೆಯ ಮಹತ್ವವನ್ನು ಸುಭಾಷಿತದ ಸಂದೇಶದೊಂದಿಗೆ ವಿವರಿಸಿದರು.ಅಮೆರಿಕಾದ ಪ್ರತಿಷ್ಠಿತ ಪೇಪಾಲ್ ಸಂಸ್ಥೆಯ ಏಐ ಆರ್ಕಿಟೆಕ್ಟ್ ಶ್ರೀರಘೋತ್ತಮ ಶ್ರೀಪಾದರಾಜ ಅವರು ತಮ್ಮ ಭಾಷಣದಲ್ಲಿ ಕಲಿಕೆಯ ಕ್ರಮದಲ್ಲಿ ವಿಷಯದ ಕುರಿತು ಕುತೂಹಲವಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಉದಾಹರಣೆ ಸಹಿತ ತಿಳಿಸಿದರು.
ಶ್ರೀ ಪ್ರಹ್ಲಾದ ಆಚಾರ್ಯರು ಕಳೆದ ಎಂಟು ವರ್ಷಗಳಲ್ಲಿ ಏಸ್ ಸಂಸ್ಥೆಯ ಶೈಕ್ಷಣಿಕ ಸಾಧನೆಯನ್ನು ತಿಳಿಸಿದರು. ಸಂಸ್ಥೆಯ ನಿರ್ದೇಶಕರಾದ ಅಕ್ಷೋಭ್ಯ ಆಚಾರ್ಯರು ಸ್ವಾಗತಿಸಿ ಅತಿಥಿಗಳಿಗೆ ಸ್ಮರಣಿಕೆ ನೀಡಿ ಅಭಿನಂದಿಸಿದರು. ಸಂಸ್ಥೆಯ ಸ್ಥಾಪಕ ಪಿ.ಲಾತವ್ಯ ಆಚಾರ್ಯ,ಅಧ್ಯಾಪಕಿ ಸೋಹಾನಿ ಭಟ್, ನಯನಾ ಉಪಸ್ಥಿತರಿದ್ದರು.
ಕಳೆದ 8 ವರ್ಷಗಳಲ್ಲಿ ಹತ್ತನೇತರಗತಿ, ಪಿಯುಸಿ ಹಾಗೂ ಸಿಇಟಿಯಲ್ಲಿ ಅತ್ಯುತ್ತಮ ಫಲಿತಾಂಶ ಹಾಗೂ ಶ್ರೇಯಾಂಕಗಳನ್ನು ಗಳಿಸಿರುವ ಆಚಾರ್ಯಾಸ ಏಸ್ ಈ ಭಾರಿ ಇನ್ನಷ್ಟು ಉಪಯುಕ್ತ ಯೋಜನೆಗಳೊಂದಿಗೆ ತರಬೇತಿಯನ್ನು ಆಯೋಜಿಸಿದೆ.ತರಬೇತಿಯ ಸಂದರ್ಭದಲ್ಲಿ ವಿಶೇಷ ಉಪನ್ಯಾಸಗಳ ಜೊತೆಗೆ ಪ್ರತೀ ಅಧ್ಯಾಯದ ಕುರಿತಾಗಿ ಮಾದರಿ ಪರೀಕ್ಷೆ,ವಿಶೇಷ ಕಾರ್ಯಾಗಾರಗಳು, ಗ್ರಂಥಾಲಯದ ಮೂಲಕ ವಿದ್ಯಾರ್ಥಿಗಳಿಗೆ ವಿವಿಧ ಪ್ರಕಾಶಕರ ಕೃತಿಗಳು ಲಭಿಸಲಿದೆ.ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಮುಂಜಾನೆಯಿಂದ ಸಂಜೆಯವರೆಗೆ ಈ ತರಬೇತಿಯನ್ನು ಆಯೋಜಿಸಲಾಗಿದೆ.
ಇದೇ ಬರುವ 17 ನೇ ತಾರೀಖಿನಿಂದ ಪ್ರಥಮ ಪಿಯುಸಿ ಪೂರೈಸಿ ದ್ವಿತೀಯ ಪಿಯುಸಿಗೆ ಸಾಗುತ್ತಿರುವ ವಿದ್ಯಾರ್ಥಿಗಳಿಗೆ ತರಬೇತಿ ಆರಂಭವಾಗಲಿದ್ದು ಹಾಗೂ ಮೇ 19 ರಿಂದ ಸಿಯಿಟಿ ಕ್ರಾಶ್ ಕೋರ್ಸ್ ತರಗತಿಗಳು ಆರಂಭಗೊಳ್ಳಲಿದೆ. ಆಸಕ್ತ ವಿದ್ಯಾರ್ಥಿಗಳು ಉಡುಪಿ ತೆಂಕಪೇಟೆಯ ಶ್ರೀಲಕ್ಷ್ಮೀವೆಂಕಟ್ರಮಣ ದೇವಾಲಯದ ಸಮೀಪದಲ್ಲಿರುವ ರಾಧೇಶಾಂ ಕಟ್ಟಡದ ಆಚಾರ್ಯಾಸ್ ಏಸ್ ಕಚೇರಿ ಅಥವಾ ಬ್ರಹ್ಮಾವರದ ಮಧುವನ ಕಾಂಪ್ಲೆಕ್ಸನ ಏಸ್ ಕಚೇರಿಯ ಮೊಬೈಲ್ ಸಂಖ್ಯೆ 9901420714 ಸಂಪರ್ಕಿಸಬೇಕೆಂದು ಸಂಸ್ಥೆಯ ನಿರ್ದೇಶಕ ಅಕ್ಷೋಭ್ಯ ಆಚಾರ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.