| ಪಡುಬಿದ್ರಿ ಎ.14 (ಉಡುಪಿ ಟೈಮ್ಸ್ ವರದಿ): ಖಾಸಗಿ ಜಾಗದಲ್ಲಿ ಇರುವ ಕಾಲುದಾರಿ ವಿಚಾರಕ್ಕೆ ಸಂಬಂಧಿಸಿ ಕಾರ್ಕಳದ ಇನ್ನಾದ ಸುಧಾಕರ ಪೂಜಾರಿ ಎಂಬವರಿಗೆ ಹಲ್ಲೆ ಮಾಡಿರುವುದಾಗಿ ಪಡುಬಿದ್ರೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾರ್ಕಳ ಇನ್ನಾದ ಸುಧಾಕರ ಪೂಜಾರಿ ಹಾಗೂ ಅಲ್ಲಿನ ಸುತ್ತಮುತ್ತಲಿನ ಸುಮಾರು 10 ಮನೆಯವರು ತಮ್ಮ ಮನೆಗಳಿಗೆ ಹೋಗಲು ಕಾಲುದಾರಿಯನ್ನು ಬಳಸುತ್ತಿದ್ದರು. ಈ ಕಾಲುದಾರಿ ಖಾಸಗಿ ಸ್ಥಳದಲ್ಲಿ ಇದ್ದುದರಿಂದ ಇತ್ತೀಚೆಗೆ ಕಾಲುದಾರಿಯನ್ನು ಮುಚ್ಚಿದ್ದರಿಂದ ಈ ದಾರಿಯನ್ನೇ ಅವಲಂಬಿಸಿಕೊಂಡಿದ್ದ ಇಲ್ಲಿನ ಸುತ್ತಮುತ್ತಲ ಜನರಿಗೆ ಈಗ ಕಾಲು ದಾರಿ ಇಲ್ಲದೆ ಸಮಸ್ಯೆಯಾಗಿದೆ. ಈ ವಿಚಾರವಾಗಿ ಅಲ್ಲಿನ ವಾಸಿಗಳೆಲ್ಲರೂ ಇನ್ನಾ ಪಂಚಾಯತ್‌ನ ನ್ಯಾಯ ನಿರ್ಣಯ ಸಮಿತಿಗೆ ದೂರು ನೀಡಿದ್ದರು. ಅದರಂತೆ ಎ.12 ರಂದು ಇನ್ನಾ ಪಂಚಾಯತ್‌ನ ಅಧ್ಯಕ್ಷ ಕುಶ ಮೂಲ್ಯ, ಗ್ರಾಮ ಕರಣಿಕರು ಹಾಗೂ ಪಂಚಾಯತ್‌ನ ಸಿಬ್ಬಂದಿಗಳು ಬಂದು ಸ್ಥಳ ವೀಕ್ಷಣೆ ಮಾಡುತ್ತಿದ್ದರು. ಈ ವೇಳೆ ಆರೋಪಿತರಾದ ಅಶೋಕ್ ಶೆಟ್ಟಿ ಮತ್ತು ಸುಧಾಕರ ಶೆಟ್ಟಿ ಎಂಬುವವರು ಅಲ್ಲಿಗೆ ಬಂದು ಒಮ್ಮೆಲೇ ಇಲ್ಲಿನ ನಿವಾಸಿ ಸುಧಾಕರ ಪೂಜಾರಿ ಅವರಿಗೆ ಅವಾಚ್ಯ ಶಬ್ಧಗಳಿಂದ ಬೈದು, ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. | |