ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿ- ಸಿಎಂ ಗೆ ವಿದ್ಯಾರ್ಥಿನಿ ಆಲಿಯಾ ಅಸಾದಿ ಮನವಿ
ಉಡುಪಿ ಎ.14(ಉಡುಪಿ ಟೈಮ್ಸ್ ವರದಿ): ದ್ವಿತೀಯ ಪಿಯುಸಿ ಪರೀಕ್ಷೆ ಎ.22 ರಿಂದ ಆರಂಭಗೊಳ್ಳಲಿರುವುದರಿಂದ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡುವ ನಿರ್ಧಾರ ಕೈಗೊಳ್ಳುವಂತೆ ಉಡುಪಿಯ ಹಿಜಾಬ್ ಹೋರಾಟದ 6 ಮಂದಿ ವಿದ್ಯಾರ್ಥಿನಿ ಯರ ಪೈಕಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆಲಿಯಾ ಅಸಾದಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಆಲಿಯಾ ಅಸಾದಿ ಅವರು, ದ್ವಿತೀಯ ಪಿಯುಸಿ ಪರೀಕ್ಷೆಗಳು ಇದೇ 22ರಿಂದ ಆರಂಭವಾಗಲಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಮ್ಮ ಭವಿಷ್ಯವು ಹಾಳಾಗುವುದನ್ನು ತಡೆಯಲು ಇನ್ನೂ ಅವಕಾಶವಿದೆ. ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ನಮಗೆ ಅವಕಾಶ ನೀಡುವ ನಿರ್ಧಾರವನ್ನು ನೀವು ತೆಗೆದುಕೊಳ್ಳಬಹುದು. ದಯವಿಟ್ಟು ಇದನ್ನು ಪರಿಗಣಿಸಿ. ನಾವು ಈ ದೇಶದ ಭವಿಷ್ಯ ಎಂದು ಬರೆದು ಕೊಂಡಿದ್ದಾರೆ ಹಾಗೂ ಹ್ಯಾಶ್ ಟ್ಯಾಗ್ ಹಿಜಾಬ್ ನಮ್ಮ ಹಕ್ಕು ಎಂದು ಉಲ್ಲೇಖಿಸಿದ್ದಾರೆ.