ಕೊಲ್ಲೂರು: ಮಹಿಳೆಯ ಚಿನ್ನದ ಸರ ಕಸಿದು ಪರಾರಿ

ಕೊಲ್ಲೂರು ಎ.12 (ಉಡುಪಿ ಟೈಮ್ಸ್ ವರದಿ): ಬೈಂದೂರಿನ ಜಡ್ಕಲ್ ಗ್ರಾಮದ ಗೀತಾ ಪಿ.ಕೆ ಎಂಬವರು ಜಡ್ಕಲ್‌ ಗ್ರಾಮದ ರಾಷ್ಟೀಯ ಹೆದ್ದಾರಿ  ಹಾಲ್ಕಲ್‌ ನಡುಗುಂದ ಎಂಬಲ್ಲಿ ಕೊಲ್ಲೂರಿಗೆ ತೆರಳಲು ಬಸ್ಸಿಗಾಗಿ ಕಾಯುತ್ತಿದ್ದ ವೇಳೆ‌ ಬಂದ ಇಬ್ಬರು ಅಪರಿಚಿತರು ಗೀತಾ ಅವರು ಧರಿಸಿದ್ದ ಲಕ್ಷಾಂತರ ಬೆಲೆ ಬಾಳುವ ಚಿನ್ನದ ಸರವನ್ನು ದೋಚಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ಕೊಲ್ಲೂರಿನಲ್ಲಿ ಬೇಕರಿ ವ್ಯವಹಾರ ನಡೆಸುತ್ತಿರುವ ತಮ್ಮ ಮಗನಿಗೆ ಎಂದಿನಂತೆ ಮಧ್ಯಾಹ್ನದ ಊಟವನ್ನು ಕೊಡುವ ಸಲುವಾಗಿ ಎ.11 ರಂದು  ಮಧ್ಯಾಹ್ನದ ವೇಳೆ ಜಡ್ಕಲ್‌ ಗ್ರಾಮದ ರಾಷ್ಟೀಯ ಹೆದ್ದಾರಿ ಹಾಲ್ಕಲ್‌ ನಡುಗುಂದ ಎಂಬಲ್ಲಿ ಕೊಲ್ಲೂರು ಕಡೆ  ಹೋಗುವ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದರು. ಈ ವೇಳೆ ಬೈಂದೂರು  ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಬಂದ 35 ವರ್ಷದ ಇಬ್ಬರು ಅಪರಿಚಿತ ವ್ಯಕ್ತಿಗಳು ಗೀತಾ ಅವರು ಧರಿಸಿದ್ದ  1,20,000 ರೂ. ಮೌಲ್ಯದ 28 ಗ್ರಾಂ ತೂಕದ ಚಿನ್ನದ ಸರವನ್ನು ಎಳೆದುಕೊಂಡು ಪರಾರಿಯಾಗಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!