ಸಿಎಂ ಮೌನವಾಗಿ ರಾಜ್ಯವನ್ನು ಗೂಂಡಾಗಳ ಕೈಗೆ ಕೊಟ್ಟಿದ್ದಾರೆ : ಯು ಟಿ ಖಾದರ್ ಟೀಕೆ

ಮಂಗಳೂರು, ಏ.11 : ಸಿಎಂ ಮೌನವಾಗಿ ರಾಜ್ಯವನ್ನು ಗೂಂಡಾಗಳ ಕೈಗೆ ಕೊಟ್ಟಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ಉಪನಾಯಕ ಯು.ಟಿ ಖಾದರ್ ಟೀಕಿಸಿದ್ದಾರೆ.

ಈ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಹೆಚ್ಚುತ್ತಿರುವ ಕೋಮು ವೈಷಮ್ಯ ವಿಚಾರದಿಂದಾಗ ಕರ್ನಾಟಕದ ಘನತೆ, ಗೌರವಕ್ಕೆ ಧಕ್ಕೆ ಉಂಟಾಗಿದೆ. ಧಾರವಾಡ ಘಟನೆಯನ್ನು ಸರ್ವ ಧರ್ಮೀಯರು ಖಂಡಿಸಿದ್ದಾರೆ. ಇಂತಹ ವಿಚಾರ ರಾಜ್ಯ ಸರಕಾರಕ್ಕೆ ತಿರುಗುಬಾಣವಾಗಲಿದೆ. ರಾಜ್ಯ ಸರಕಾರ ದಿವಾಳಿಯಾಗಿದೆ, ಹಾಗಾಗಿ ಇಂತಹದ್ದಕ್ಕೆ ಪ್ರೇರಣೆ ನೀಡುತ್ತಿದೆ. ಸಿಎಂ ಮೌನವಾಗಿ ರಾಜ್ಯವನ್ನು ಗೂಂಡಾಗಳ ಕೈಗೆ ಕೊಟ್ಟಿದ್ದಾರೆ ಎಂದರು.

ಸರಕಾರ, ಮಾಧ್ಯಮಗಳಿಗೆ ದೊಡ್ಡ ಜವಾಬ್ದಾರಿ ಇದೆ. ಮಾಧ್ಯಮಗಳು ಎರಡು ಬಾರಿ ನಿರ್ಲಕ್ಷ್ಯ ಮಾಡಿದ್ರೆ ಅವರು ಸುಮ್ಮನಾಗುತ್ತಾರೆ. ಫ್ಲೆಕ್ಸ್ ಹಾಕಿದ ಕೂಡಲೇ ಪ್ರಚಾರ ಕೊಟ್ಟರಷ್ಟೇ ಸುದ್ದಿಯಾಗುತ್ತದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಬಗ್ಗೆ ಒಂದು ವಾರ ಚರ್ಚೆ ಮಾಡಿ ಮಾಧ್ಯಮಗಳು ಯಾಕಾಗಿ ಅದನ್ನ ಮಾಡ್ತಿಲ್ಲ ಅನ್ನೋದು ನಂಗೆ ಅಚ್ಚರಿ ಆಗ್ತಿದೆ ಎಂದಿದ್ದಾರೆ.

ಆಡಳಿತ ಪಕ್ಷದ ನಾಯಕರು, ಸಚಿವರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಸಿಎಂ ಈಗಲಾದರೂ ಮಾತಾಡಬೇಕು. ಜನತೆಯಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕು. ಕೋಮುವಾದಿಗಳನ್ನು ಮಟ್ಟ ಹಾಕಬೇಕು. ಇಲ್ಲದಿದ್ದರೆ ಅದನ್ನು ಸರಕಾರ ಎನ್ನಲಾಗದು ಎಂದರು. ಇದೇ ವೇಳೆ ಕರಾವಳಿಯ ಮರಳುಗಾರಿಕೆ ಸಮಸ್ಯೆ ಬಗೆಹರಿದಿಲ್ಲ ಎಂದ ಅವರು, ಮನೆ ಕಟ್ಟಲು ಜನ ಪರದಾಡುವಂತಾಗಿದೆ. ಕಾಂಗ್ರೆಸ್ ಸರಕಾರವಿದ್ದಾಗ ಸ್ಯಾಂಡ್ ಬಜಾರ್ ಆ್ಯಪ್ ಮೂಲಕ ಮರಳು ಖರೀದಿಸಬಹುದಿತ್ತು. ಇವತ್ತು ಮೂರು ಪಟ್ಟು ದರ ಕೊಡುವಂತಾಗಿದೆ. ಕಳೆದ ಆಗಸ್ಟ್ ನಲ್ಲಿ ಮರಳು ಬಂದ್ ಆಗಿದ್ದು ಇನ್ನೂ ಆರಂಭಿಸಿಲ್ಲ. ಹೀಗಾಗಿ ಅಕ್ರಮ ಮರಳುಗಾರಿಕೆ ಮುಂದುವರಿದಿದೆ. ತಕ್ಷಣವೇ ಸರಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Leave a Reply

Your email address will not be published. Required fields are marked *

error: Content is protected !!