ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘದ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ
ಉಡುಪಿ(ಉಡುಪಿ ಟೈಮ್ಸ್ ವರದಿ): ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ (ರಿ.) ಉಡುಪಿ ಇದರ ಮಹಾಸಭೆಯು ಮಾರ್ಚ್ 22 ರಂದು ಸಂಜೆ ಉಡುಪಿಯ ಹಿಂದಿ ಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ 2022-2024 ನೇ ಸಾಲಿಗೆ ನೂತನ ಆಡಳಿತ ಸಮಿತಿಯನ್ನು ರಚಿಸಲಾಯಿತು. ಉಡುಪಿ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಗೌರವಾಧ್ಯಕ್ಷರಾಗಿದ್ದು, ಎಮ್. ಮಹೇಶ್ ಕುಮಾರ್ (ಶ್ರೀ ವಿಘ್ನೇಶ್ವರ ಪ್ರಿಂಟರ್ಸ್ ಕಲ್ಮಾಡಿ) ಗೌರವ ಸಲಹೆಗಾರರಾಗಿರುವರು. ಅಧ್ಯಕ್ಷರಾಗಿ ಪ್ರಕಾಶ್ ಜಿ. ಕೊಡವೂರು (ಶ್ರೀ ಶಂಕರನಾರಾಯಣ ಪ್ರಿಂಟರ್ಸ್ ಕೊಡವೂರು), ಉಪಾಧ್ಯಕ್ಷರುಗಳಾಗಿ ರಮೇಶ್ ಕುಂದರ್ (ಐಶ್ವರ್ಯ ಪ್ರಿಂಟರ್ಸ್ ಮಲ್ಪೆ) ಮತ್ತು ಪ್ರಕಾಶ್ ಕಲ್ಯಾಣಿ (ಕಲ್ಯಾಣಿ ಪ್ರೆಸ್ ಪೆರ್ಡೂರು), ಪ್ರಧಾನ ಕಾರ್ಯದರ್ಶಿಯಾಗಿ ಜಿ.ಎಂ. ಶರೀಫ್ (ಪ್ರಿಂಟ್ ಪಾಯಿಂಟ್ ಉಡುಪಿ), ಜತೆ ಕಾರ್ಯದರ್ಶಿಯಾಗಿ ಕೆ. ಉದಯ (ಅನ್ನಪೂರ್ಣೇಶ್ವರಿ ಪ್ರೆಸ್ ಸೈಬ್ರಕಟ್ಟೆ), ಕೋಶಾಧಿಕಾರಿಯಾಗಿ ರವಿ ಎನ್. ಬೇಳಂಜೆ (ಶಶಿ ಪ್ರಿಂಟರ್ಸ್ ಗೋಳಿಯಂಗಡಿ) ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಯು. ಮೋಹನ್ ಉಪಾಧ್ಯ (ಆದರ್ಶ್ ಪ್ರಿಂಟರ್ಸ್ ಉಡುಪಿ), ರಮೇಶ್ ತಿಂಗಳಾಯ (ಶಬರಿ ಪ್ರಿಂಟರ್ಸ್ ಮಲ್ಪೆ), ಚಂದ್ರ ನಾಯರಿ (ರಮ್ಯ ಪ್ರಿಂಟರ್ಸ್ ಸಾಲಿಗ್ರಾಮ), ಅಶೋಕ್ ಶೆಟ್ಟಿ (ಅಶೋಕ್ ಪ್ರಿಂಟರ್ಸ್ ಅಂಬಲಪಾಡಿ), ಶಿವರಾಮ ಆಚಾರ್ಯ (ಶ್ರೀರಾಮ್ ಪ್ರಿಂಟರ್ಸ್ ಕಾಪು), ಬಿ.ಜಿ. ಸುಬ್ಬರಾವ್ (ಸೂರ್ಯ ಪ್ರಿಂಟರ್ಸ್ ಉಡುಪಿ), ಸತೀಶ್ ನಾಯಕ್ (ಶಾಲಿಮಾರ್ ಪ್ರಿಂಟರ್ಸ್ ಮಣಿಪಾಲ), ಯತೀಶ್ಚಂದ್ರ (ಶ್ರೀನಿಧಿ ಗ್ರಾಫಿಕ್ಸ್ ಮಣಿಪಾಲ), ಸುಧೀರ್ ಡಿ ಬಂಗೇರ (ಸುಜನ್ ಪ್ರೆಸ್ ಕಟಪಾಡಿ), ಅನಿಲ್ ಕುಮಾರ್ (ಶ್ರುತಿ ಗ್ರಾಫಿಕ್ಸ್ ದೊಡ್ಡಣಗುಡ್ಡೆ), ಸಂತೋಷ್ ಕುಮಾರ್ (ಗಣೇಶ್ ಪ್ರಿಂಟರ್ಸ್ ಸಂಪಿಗೆನಗರ), ರಾಮಚಂದ್ರ ಪೈ (ಮಹಮಾಯ ಪ್ರಿಂಟರ್ಸ್ ಉಡುಪಿ) ಮತ್ತು ಗೋಪಾಲ ಕೃಷ್ಣ ಶೆಟ್ಟಿ (ಶ್ರೀನಿವಾಸ ಪ್ರಿಂಟರ್ಸ್ ಅಂಬಲಪಾಡಿ) ಆಯ್ಕೆಗೊಂಡರು.
ನಿಯೋಜಿತ ಅಧ್ಯಕ್ಷರಾದ ಪ್ರಕಾಶ್ ಜಿ. ಕೊಡವೂರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ನಿಯೋಜಿತ ಕಾರ್ಯದರ್ಶಿ ಜಿ.ಎಂ. ಶರೀಫ್ ಕೊನೆಯಲ್ಲಿ ಧನ್ಯವಾದವಿತ್ತರು. ಮಾಜಿ ಗೌರವ ಸಲಹೆಗಾರರಾದ ಅಶೋಕ್ ಶೆಟ್ಟಿ ಮತ್ತು ಬಿ.ಜಿ. ಸುಬ್ಬರಾವ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಂಘದ ಅಧ್ಯಕ್ಷರಾದ ಎಂ. ಮಹೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮನೋಜ್ ಕಡಬ ವರದಿ ವಾಚಿಸಿದರು. ಕೋಶಾಧಿಕಾರಿ ಸುಧೀರ್ ಡಿ. ಬಂಗೇರ ಲೆಕ್ಕ ಪತ್ರ ಮಂಡಿಸಿದರು.