ರಾಮಮಂದಿರಕ್ಕಾಗಿ ದಾವಣಗೆರೆಯಿಂದ 15 ಕೆ.ಜಿ. ಬೆಳ್ಳಿ ಇಟ್ಟಿಗೆ ರವಾನಿಸಲು ನಿರ್ಧಾರ

ದಾವಣಗೆರೆ: ಅಯೋಧ್ಯೆಯಲ್ಲಿ ಇದೇ 5ರಂದು ರಾಮಮಂದಿರ ಶಿಲಾನ್ಯಾಸ ನೆರವೇರುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ ಆರರಂದು ದಾವಣಗೆರೆ ಜಿಲ್ಲೆಯಿಂದ 15 ಕೆ.ಜಿ.ಬೆಳ್ಳಿ ಇಟ್ಟಿಗೆಯನ್ನು ಕೊಂಡೊಯ್ಯಲು ಹಿಂದೂ ಪರ ಸಂಘಟನೆಗಳು ಮುಂದಾಗಿವೆ.

1990ರಲ್ಲಿ ದಾವಣಗೆರೆಯಲ್ಲಿ ನಡೆದ ಗೋಲಿಬಾರ್‌ನಲ್ಲಿ ಮೃತಪಟ್ಟವರ ಸವಿನೆನಪಿಗಾಗಿ 10 ಲಕ್ಷದ ಮೌಲ್ಯದ 15 ಕೆ.ಜಿ.ತೂಕದ ಬೆಳ್ಳಿಯ ಇಟ್ಟಿಗೆಯನ್ನು ಅಯೋಧ್ಯೆಗೆ ನೀಡಲು ಶರೀರಾಮ ಭಕ್ತರು ಹಾಗೂ ಹಿಂದೂಪರ ಸಂಘಟನೆಗಳ ಮುಖಂಡರು ತೀರ್ಮಾನಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಇಂದಿಲ್ಲಿ ತಿಳಿಸಿದ್ದಾರೆ.

1990ರ ಅಕ್ಟೋಬರ್ 6ರಂದು ಬೇತೂರು ರಸ್ತೆಯಲ್ಲಿರುವ ವೆಂಕಟೇಶ್ವರ ವೃತ್ತದಲ್ಲಿ ನಡೆದ ಗೋಲಿಬಾರ್‌ನಲ್ಲಿ 8 ಜನರು ಮೃತಪಟ್ಟಿದ್ದು, 72ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿತ್ತು. ಈ ಪೈಕಿ 40ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದರು. ಅಂದು ಹುತಾತ್ಮರಾದ 8 ಮಂದಿಯ ಹೆಸರನ್ನು ಇಟ್ಟಿಗೆಯಲ್ಲಿ ಕೆತ್ತಿಸಲಾಗುತ್ತದೆ ಎಂದು ಹೇಳಿದರು. 

Leave a Reply

Your email address will not be published. Required fields are marked *

error: Content is protected !!