ಉಡುಪಿ: ಶ್ರೀಮಾಲ್ತಿದೇವಿ ಪರಿಶಿಷ್ಟ ಜಾತಿ ಮೀನುಗಾರರ ಸಹಕಾರ ಸಂಘ ಶುಭಾರಂಭ

ಉಡುಪಿ, ಎ.10 (ಉಡುಪಿ ಟೈಮ್ಸ್ ವರದಿ): ಅಂಬಲಪಾಡಿಯ ಪಂದುಬೆಟ್ಟುವಿನ ಶ್ರೀನಿಧಿ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ನಿರ್ಮಾವಾಗಿರುವ ಶ್ರೀಮಾಲ್ತಿದೇವಿ ಪರಿಶಿಷ್ಟ ಜಾತಿ ಮೀನುಗಾರರ ಸಹಕಾರ ಸಂಘ ಮಲ್ಪೆ ಇದರ ಉದ್ಘಾಟನಾ ಸಮಾರಂಭ ಇಂದು ಅಂಬಲಪಾಡಿ‌ಯ ಶ್ರೀ ಜನಾರ್ಧನ ಮತ್ತು ಶ್ರೀ ಮಹಾಕಾಳಿ ದೇವಸ್ಥಾನ  ಭವನಿ ಮಂಟಪದಲ್ಲಿ ನಡೆಯಿತು.

ಸಮಾಜ ಕಲ್ಯಾಣ ಸಚಿವ ಕೊಟ ಶ್ರೀನಿವಾಸ ಪೂಜಾರಿ ಅವರು ಶ್ರೀ ಮಾಲ್ತಿದೇವಿ ಪರಿಶಿಷ್ಟ ಜಾತಿ ಮೀನುಗಾರರ ಸಹಕಾರ ಸಂಘವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಅನೇಕ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮೀನುಗಾರರಿಗೆ ಸರಕಾರದ ವತಿಯಿಂದ ಸಿಗಬೇಕಾದ ಸವಲತ್ತುಗಳು ಸರಿಯಾಗಿ ಅವರನ್ನು ತಲುಪುತ್ತಿಲ್ಲ. ಈ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ ಮೀನುಗಾರರಿಗೆ ಸಿಗಬೇಕಾದ ಸವಲತ್ತುಗಳು ಸಿಗುವಂತಾಗಬೇಕು. ಇಂತಹ ಆರ್ಥಿಕ ಸಂಕಷ್ಟದ ಸಮಯದಲ್ಲಿಯೂ 75 ಯುನಿಟ್ ವಿದ್ಯುತ್ ನ್ನು ಪರಿಶಿಷ್ಟ ಜಾತಿಯವರಿಗೆ ಉಚಿತವಾಗಿ ನೀಡಲು ನಿರ್ಧರಿಸಿದೆ. ವಿಕಾಸ ಸೌಧದ ಸಮೀಪ  26 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್ ಸ್ಪೂರ್ತಿ ಭವನ ನಿರ್ಮಾಣಕ್ಕಾಗಿ ಅಂಬೇಡ್ಕರ್ ದಿನಾಚರಣೆಯಂದು ಅಡಿಗಲ್ಲು ಹಾಕಬೇಕು ಎಂದು ನಿಶ್ಚಯಿಸಿರುವುದಾಗಿ ತಿಳಿಸಿದ್ದಾರೆ.

ಇದೇ ವೇಳೆ ವಿನಯ ಸಾಮರಸ್ಯ ಯೋಜನೆ ಕುರಿತು ಮಾಹಿತಿ ನೀಡೊದ ಅವರು, ಈ ಯೋಜನೆ ಮೂಲಕ ಬಡ ಮಗುವಿನ ಶಿಕ್ಷಣಕ್ಕೆ ನೆರವು ನೀಡುವ ಸಲುವಾಗಿ, ಆರ್ಥಿಕ ಸಂಕಷ್ಟದಲ್ಲಿ ಇರುವ ಮಗುವನ್ನು ಇಲಾಖೆಯ ವತಿಯಿಂದ ದತ್ತು ಪಡೆದು ಆ ಮಗುವಿನ ಶೈಕ್ಷಣಿಕ ವೆಚ್ಚವನ್ನು ಇಲಾಖೆ ವತಿಯಿಂದ ಭರಿಸುವ ಯೋಜನೆಯಾಗಿದೆ. ಸಮಾಜದಲ್ಲಿ ಅಸ್ಪರ್ಶ್ಯತೆಯನ್ನು ನಿವಾರಿಸಬೇಕು ಎಂಬ ಉದ್ದೇಶ ಹೊಂದಿದ್ದು, ಈ ನಿಟ್ಟಿನಲ್ಲಿ ಸಮಸಜದ ಎಲ್ಲಾ ಸ್ಥರಗಳಲ್ಲೂ  ಸಮಬಾಳು ಸಮಪಾಲು, ಸಮಾಜಿಕ ನ್ಯಾಯ  ಸಿಗುವ ಕೆಲಸ ಆಗಬೇಕು ಎಂದರು.

ಈ ವೇಳೆ ಶ್ರೀ ಜನಾರ್ಧನ ಮತ್ತು ಶ್ರೀ ಮಹಾಕಾಳಿ ದೇವಸ್ಥಾನ ಅಂಬಲಪಾಡಿ ಇದರ ಧರ್ಮದರ್ಶಿ ನೀ.ಬಿ ವಿಜಯ ಬಳ್ಳಾಲ್ ಅವರು ಮಾತನಾಡಿ ಶುಭ ಹಾರೈಸಿದರು. ಶ್ರೀಮಾಲ್ತಿದೇವಿ ಪರಿಶಿಷ್ಟ ಜಾತಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ‌ ದಿನಕರ ಬಾಬು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಷೇರು ಪತ್ರ ವಿತರಿಸಿದರು. ಹಾಗೂ ಶಾಸಕ ರಘುಪತಿ ಭಟ್ ಅವರು ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಿದರು.

ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕಚ್ಚೂರು ಶ್ರೀ ಮಾಲ್ತಿದೇವಿ ದೇವಸ್ಥಾನ, ಶ್ರೀಬಬ್ಬುಸ್ವಾಮಿ ಮೂಲಕ್ಷೇತ್ರ ಬಾರಕೂರು ಇದರ ಧರ್ಮದರ್ಶಿ‌ ಗೋಕುಲ್ ದಾಸ್ ಬಾರಕೂರು, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, 

ಉಡುಪಿ ದಕ್ಷಿಣ ಕನ್ನಡ ಮೀನು ಮಾರಾಟಗಾರರ ಫೆಡರೇಷನ್, ಮಂಗಳೂರು ಇದರ ಅಧ್ಯಕ್ಷ ಯಶ್ಪಾಲ್ ಸುವರ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಬಿಜೆಪಿ ಕಾರ್ಯಕಾರಿಣಿ ಸದಸ್ಯ ಗುರ್ಮೆ ಸುರೇಶ್ ಶೆಟ್ಟಿ, ಸಂಘದ ಮುಖ್ಯ ಸಲಹೆಗಾರ ಚಂದ್ರ ಟಿ ಸುವರ್ಣ, ಉಪಾಧ್ಯಕ್ಷ ಸುವೇಶ್,  ಮುಖ್ಯ ಕಾರ್ಯನಿರ್ವಹಣಾಧಿಕಾರಿ‌ ರಾಜೇಂದ್ರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!