ಮಲ್ಪೆ ಬೀಚ್ ನಲ್ಲಿ ಚಿನ್ನಾಭರಣಗಳಿದ್ದ ಬ್ಯಾಗ್ ಕಳವು

ಮಲ್ಪೆ ಎ.10 (ಉಡುಪಿ ಟೈಮ್ಸ್ ವರದಿ): ಮಲ್ಪೆ ಕಡಲ ಕಿನಾರೆಗೆ ಪ್ರವಾಸಕ್ಕೆಂದು ಬಂದಿದ್ದ ಬೈಂದೂರಿನ‌ ಗೋಡ್ವಿನ್ ಮಾಬೆನ್ ಹಾಗೂ ಅವರ ಮನೆಯವರ ಸೊತ್ತು ಇಟ್ಟಿದ್ದ ಬ್ಯಾಗ್ ಕಳವಾಗಿರುವ ಘಟನೆ ನಿನ್ನೆ ನಡೆದಿದೆ.

ಬೈಂದೂರು ತಾಲೂಕಿನ ಗೋಡ್ವಿನ್ ಮಾಬೆನ್‌ ಅವರು ತಮ್ಮ ಮನೆಯ ಸದಸ್ಯರೊಂದಿಗೆ ‌ ನಿನ್ನೆ ಪ್ರವಾಸಕ್ಕೆಂದು ಮಲ್ಪೆ ಬೀಚ್‌ ಗೆ ಬಂದಿದ್ದರು. ಮಲ್ಪೆ ಬೀಚ್‌ನಲ್ಲಿ ಸಂಜೆ 4‌ ಗಂಟೆ ವೇಳೆಗೆ ಸಮುದ್ರದ ನೀರಿನಲ್ಲಿ ಆಟ ಆಡುತ್ತಿದ್ದು ಬಳಿಕ ಬಟ್ಟೆ ಬದಲಿಸಲು ಬಾತ್‌ ರೂಮ್‌ನಲ್ಲಿದ್ದ ಚಿಕ್ಕಮ್ಮನಿಗೆ ಒಂದು ಬ್ಯಾಗ್ ನೀಡಿ ವಾಪಾಸು ಇತರ ಬ್ಯಾಗ್‌ ಇಟ್ಟಿದ್ದ ಜಾಗಕ್ಕೆ ಬಂದಾಗ ಗೋಡ್ವಿನ್ ಅವರ ಬ್ಯಾಗ್‌ ಕಳವಾಗಿದ್ದುಗಮನಕ್ಕೆ ಬಂದಿದೆ. ಕಳವಾದ ಬ್ಯಾಗಿನಲ್ಲಿ ಎರಡು ಮೊಬೈಲ್ ಹಾಗೂ ಚಿನ್ನಾಭರಣ ಮತ್ತು ಎಟಿಎಂ ಸಹಿತ ಇತರ ದಾಖಲೆಗಳು ಇದ್ದು ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ 77,500 ಆಗಿದೆ ಎಂಬುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!