ಉಡುಪಿ: ಜುವೆಲ್ಲರಿ ಮಾಲಕರ ಪುತ್ರ ನೇಣಿಗೆ ಶರಣು

ಉಡುಪಿ, ಏ.9: ಜುವೆಲ್ಲರಿ ಮಾಲಕರೋರ್ವರ ಪುತ್ರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ.

ಮೃತ ಯುವಕ ಮಹೇಶ್ ಭಟ್ (24ವ)ಎಂದು ಗುರುತಿಸಲಾಗಿದೆ. ವಾದಿರಾಜ ರಸ್ತೆಯ ಭೂತದ ಓಣಿಯ ಮನೆಯಲ್ಲಿ ಮಹೇಶ್ ಭಟ್ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು. ಇವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರೆಂದು ತಿಳಿದುಬಂದಿದೆ.

ನಗರ ಪೋಲಿಸ್ ಠಾಣೆಯ ತನಿಖಾ ಸಹಾಯಕ ವಿಶ್ವನಾಥ ಶೆಟ್ಟಿ ಅಮಾಸೆಬೈಲು, ಸಿಬ್ಬಂದಿ ಜೀವನ್ ಕುಮಾರ್ ಘಟನಾ ಸ್ಥಳದಲ್ಲಿದ್ದು ಕಾನೂನು ಪ್ರಕ್ರಿಯೆ ನಡೆಸಿದರು. ಸಮಾಜ ಸೇವಕ ನಿತ್ಯಾನಂದ ಒಳಕಾಡು ಶವ ವೈದ್ಯಕೀಯ ಪರೀಕ್ಷೆಗೆ ಸಾಗಿಸಲು ಸಹಕರಿಸಿದರು.

Leave a Reply

Your email address will not be published. Required fields are marked *

error: Content is protected !!