ಇನ್ಸ್ಟಾಗ್ರಾಮ್’ಗಾಗಿ ವೀಡಿಯೋ ಶೂಟ್ ಮಾಡುತ್ತಿದ್ದ ಮೂವರ ಮೇಲೆ ರೈಲು ಹರಿದು ಸಾವು

ಚೆನ್ನೈ ಎ.8: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡುವ ಸಲುವಾಗಿ ರೈಲ್ವೆ ಹಳಿಯ ಬಳಿ ವೀಡಿಯೋ ಶೂಟ್ ಮಾಡುತ್ತಿದ್ದ ಮೂವರ ಮೇಲೆ ವೇಗವಾಗಿ ಬಂದ ರೈಲು ಹರಿದು, ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.

ಕೆ.ಮೋಹನ್(17), ಪ್ರಕಾಶ್ (17) ಹಾಗೂ ಎಸ್.ಅಶೋಕ್(24) ಮೃತಪಟ್ಟವರು. ಈ ಮೂವರು ಯುವಕರು ಚೆಂಗಲಪಟ್ಟು ಸಮೀಪದ ರೈಲ್ವೆ ಹಳಿ ಬಳಿ ವೀಡಿಯೋ ಶೂಟ್ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ವೇಗವಾಗಿ ಬರುತ್ತಿದ್ದ ಸ್ಥಳೀಯ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಚೆಂಗಲಪಟ್ಟು ರೈಲ್ವೇ ಪೊಲೀಸರು, ಈ ಮೂವರು ಸ್ನೇಹಿತರಾಗಿದ್ದು, ಚೆಂಗಲಪಟ್ಟು ಬಳಿಯ ಸಿಂಗಪೆರುಮಾಳ್ ಕೋಯಿಲ್ ಬಳಿಯ ಚೆಟ್ಟಿಪುನಯಂ ಪ್ರದೇಶಕ್ಕೆ ಸೇರಿದವರು. ಪ್ರತಿದಿನವೂ ಈ ಮೂವರು ರೈಲ್ವೇ ನಿಲ್ದಾಣದಲ್ಲಿ ಇಂತಹ ವೀಡಿಯೋಗಳನ್ನು ಚಿತ್ರೀಕರಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದರು ಎಂದಿದ್ದಾರೆ. ಈ ಬಗ್ಗೆ  ಚೆಂಗಲಪಟ್ಟು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!