ಕಾಪು: ಮಹಿಳೆ ಆತ್ಮಹತ್ಯೆ

ಕಾಪು ಎ.8 (ಉಡುಪಿ ಟೈಮ್ಸ್ ವರದಿ): ತಮಗಿದ್ದ ಅನಾರೋಗ್ಯದಿಂದ ಮನನೊಂದು ಕಾಪುವಿನ ಏಣಗುಡ್ಡೆಯ ನಳಿನಿ ಅಂಚನ್ ಎಂಬವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ನೇಣು ಬಿಗಿದ ಸ್ಥಿತಿಯಲ್ಲಿ ಕಂಡ ನಳಿನಿ ಅಂಚನ್ ಅವರನ್ನು ತಕ್ಷಣ ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದು ಬಳಿಕ ಅಲ್ಲಿಂದ ವೈದ್ಯರ ಸಲಹೆ ಮೆರೆಗೆ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು ಈ ವೇಳೆ ಆಸ್ಪತ್ರೆಯಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಅದರಂತೆ ನಳಿನಿ ಅಂಚನ್ ರವರು ತನಗಿದ್ದ ಉಬ್ಬಸ ಮತ್ತು ನರ ಸಂಬಂದಿ ಖಾಯಿಲೆಯಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು‌ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!