ಮುಸ್ಕಾನ್ ಮತ್ತು ಆಕೆಯ ತಂದೆಯನ್ನು ಬಂಧಿಸಿ-ಪ್ರಮೋದ್ ಮುತಾಲಿಕ್ ಒತ್ತಾಯ
ಬೆಳಗಾವಿ, ಏ 08: ಮಂಡ್ಯದ ಮುಸ್ಕಾನ್ ಅವರನ್ನು ಹಾಡಿ ಹೊಗಳಿರುವಂತ ಆಲ್ ಖೈದ ಉಗ್ರ ಜವಹರಿ ವೀಡಿಯೋ ಬಂದಿದ್ದು ಎಲ್ಲಿಂದ ಮತ್ತು ಹೇಗೆ ಎನ್ನುವ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು. ಮಂಡ್ಯದ ಮುಸ್ಕಾನ್ ಹಾಗೂ ಆಕೆಯನ್ನು ಬಂಧಿಸಬೇಕು ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಒತ್ತಾಯಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಆಲ್ ಖೈದಾ ಸಂಘಟನೆಯನ್ನು ನಿಷೇಧಿಸಲಾಗಿದ್ದರೂ, ಉಗ್ರ ಜವಹರಿ ವೀಡಿಯೋ ಬಂದಿದ್ದು ಎಲ್ಲಿಂದ ಮತ್ತು ಹೇಗೆ ಎನ್ನುವ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು. ಅಲ್ಲದೇ ಈವರೆಗೆ ಅವರ ಮನೆಗೆ ಯಾರೆಲ್ಲಾ ಭೇಟಿ ನೀಡಿದ್ದಾರೆ ಎಂಬುದನ್ನು ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ಕರ್ನಾಟಕದ ಮಂಡ್ಯದ ಮುಸ್ಕಾನ್ ನನ್ನು, ಆಲ್ ಖೈದಾ ಜವಹರಿ ಹೊಗಳಿದ್ದು ಖಂಡನೀಯವಾಗಿದೆ. ಈ ವಿಚಾರವನ್ನು ಸರ್ಕಾರ ಹಗುರವಾಗಿ ತೆಗೆದುಕೊಳ್ಳಬಾರದು. ಆಲ್ ಖೈದಾ ನಿಷೇಧವಿದ್ದರೂ ವೀಡಿಯೋ ರಿಲೀಸ್ ಆಗಿದ್ದು ಹೇಗೆ.? ಎಲ್ಲಿಂದ ಬಂತು ಎನ್ನುವ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.