ಉಡುಪಿ: ಎಟಿಎಂನಲ್ಲಿ ಕಳವಿಗೆ ಯತ್ನಿಸಿದ್ದ ಆರೋಪಿಯ ಬಂಧನ

ಉಡುಪಿ, ಏ.8: ಅಂಬಾಗಿಲುವಿನ ಪೆರಂಪಳ್ಳಿ ಕ್ರಾಸ್‌ ನ ಕೆನರಾ ಬ್ಯಾಂಕ್‌ ಎಟಿಎಂ ಲಾಕರ್‌ ಡೋರ್‌ ಮುರಿದು ಕಳವಿಗೆ ಯತ್ನಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಹನುಮಂತ (19) ಎಂದು ಆರೋಪಿ. ಎಟಿಎಂ ಲಾಕರ್‌ ಡೋರ್‌ ಮುರಿದು ಕಳವು ಮಾಡಲು ಪ್ರಯತ್ನಿಸಿರುವ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಗರಿಬೊಮ್ಮನಹಳ್ಳಿಯಲ್ಲಿ ಆರೋಪಿ ಇರುವ ಬಗ್ಗೆ ಪತ್ತೆಹಚ್ಚಿ, ಅಲ್ಲಿಗೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇಲೆಕ್ಟ್ರಾನಿಕ್ ಪೆಮೆಂಟ್ ಸರ್ವಿಸ್ ಕಂಪೆನಿಯಲ್ಲಿ ಜನರಲ್ ಮ್ಯಾನೇಜರ್ ಆಗಿರುವ, ಉಡುಪಿ ಮತ್ತು ಮಂಗಳೂರಿನ ಕೆನರಾ ಬ್ಯಾಂಕ್‌ ಎಟಿಎಂ ಶಾಖೆಗಳಿಗೆ ಹಣವನ್ನು ತುಂಬಿಸುವ ಕೆಲಸ ಮಾಡುತ್ತಿರುವ ಸೈಮನ್ ಡಿ ಸೋಜ ಅವರು ಎಟಿಎಂ ಲಾಕರ್‌ ಡೋರ್‌ ಮುರಿದು ಕಳವು ಮಾಡಲು ಪ್ರಯತ್ನಿಸಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಆರೋಪಿಯನ್ನು ಪತ್ತೆಹಚ್ಚಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.‌

ಆರೋಪಿ ಪತ್ತೆ ಕಾರ್ಯಾಚರಣೆಯಲ್ಲಿ  ಪೊಲೀಸ್‌ ಅಧೀಕ್ಷಕ ಎನ್‌. ವಿಷ್ಣುವರ್ಧನ್‌ ಅವರ ಆದೇಶದಂತೆ,  ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಸಿದ್ದಲಿಂಗಪ್ಪ ಹಾಗೂ ಡಿವೈಎಸ್‌ಪಿ ಸುಧಾಕರ ಸದಾನಂದ ನಾಯ್ಕ್ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಮೋದ ಕುಮಾರ್ ಪಿ,  ಮಹೇಶ್ ಟಿ.ಎಮ್, ವಾಸಪ್ಪ ನಾಯ್ಕ್, ವಿಜಯ ಸಿ ಹಾಗೂ ಸಿಬ್ಬಂದಿಯವರಾದ, ಸತೀಶ, ಕಿರಣ್, ಸಂತೋಷ ರಾಠೋಡ್ ಭಾಗವಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!