ಸಗ್ರಿ ಶ್ರೀವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ: ಹೊರೆಕಾಣಿಕೆ ಸಮರ್ಪಣೆ
ಉಡುಪಿ ಎ.8 (ಉಡುಪಿ ಟೈಮ್ಸ್ ವರದಿ): ಸಗ್ರಿ ಶ್ರೀವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ನಿನ್ನೆ ಶ್ರೀಕೃಷ್ಣ ಮಠದಿಂದ ಹೊರೆ ಕಾಣೀಕೆ ಸಮರ್ಪಿಸಲಾಯಿತು.
ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದ ಬಳಿ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಈ ಹೊರೆಕಾಣೀಕೆ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯು ಕಲಶ ಹೊತ್ತ ಮಹಿಳೆಯರೊಂದಿಗೆ ಭಜನಾ ತಂಡ, ಸಾಂಸ್ಕೃತಿಕ ಕಲೆ, ಯಕ್ಷಗಾನ, ಡೋಲು ನೃತ್ಯ, ವಾದ್ಯ ಸಂಗೀತ ತಂಡದ ಜೊತೆಗೆ ಅದ್ದೂರಿಯಾಗಿ ಕಲ್ಸಂಕ, ಕಡಿಯಾಳಿ ಮೂಲಕ ಸಾಗಿ ಸಗ್ರಿ ಶ್ರೀ ವಾಸುಕಿ ದೇಗುಲಕ್ಕೆ ತಲುಪಿತು.
ಈ ಸಂದರ್ಭ ಮೆರವಣಿಗೆಯಲ್ಲಿ ಸಗ್ರಿ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇಗುಲದ ಧರ್ಮದರ್ಶಿ ಸಗ್ರಿ ಗೋಪಾಲಕೃಷ್ಣ ಸಾಮಗ, ಸಗ್ರಿ ಅನಂತ ಸಾಮಗ, ವಾಸುದೇವ ಪೆರಂಪಳ್ಳಿ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಲಕ್ಷ್ಮೀನಾರಾಯಣ ಅಸ್ರಣ್ಣ, ಕಮಲಾ ದೇವಿ ಅಸ್ರಣ್ಣ, ಹರಿನಾರಾಯಣ ಅಸ್ರಣ್ಣ, ವೆಂಕಟರಮಣ ಅಸ್ರಣ್ಣ, ಶ್ರೀನಾರಾಯಣಗುರು ವಿಚಾರ ವೇದಿಕೆಯ ಕರ್ನಾಟಕ ರಾಜ್ಯದ ಅಧ್ಯಕ್ಷ ಸತ್ಯಜಿತ್ ಸುರತ್ಕಲ್, ಮಂಗಳೂರು ಸಾಮಾಜಿಕ ಮುಖಂಡರಾದ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಹರಿಕೃಷ್ಣಪುನರೂರು, ಪೇಜಾವರಮಠದ ರಘುರಾಮ ಆಚಾರ್ಯ, ಉದ್ಯಮಿಗಳಾದ ಅಂಡಾರು ದೇವಿಪ್ರಸಾದ ಶೆಟ್ಟಿ, ಹರೀಶ ಪೂಜಾರಿ, ಶ್ರೀಪತಿ ಭಟ್ ಮೂಡುಬಿದ್ರೆ, ಸಗ್ರಿ ಸುಬ್ರಹ್ಮಣ್ಯ ಭಟ್, ಹರಿ ಉಡುಪ, ದೊಡ್ಡಯ್ಯ ಮೂಲ್ಯ,ಲೋಕಯ್ಯ ಸಾಲಿಯಾನ್, ಈಶ್ವರ ಕಟೀಲು, ನಿತಿನ್ ಕಾವ, ಜಯರಾಮ ಮುಕಾಲ್ದಿ, ಗಣೇಶ ಶೆಟ್ಟಿ, ದಿವಾಕರ ರೈ ಚಿಕ್ಕಮಗಳೂರು ಪಾಲ್ಗೊಂಡಿದ್ದರು.
ಇನ್ನು ದೇಗುಲದಲ್ಲಿ ಇಂದು ಸಂಜೆ ವಿಶೇಷ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ 5 ಕ್ಕೆ ಚಕ್ರವರ್ತಿ ಸೂಲಿಬೆಲೆ ಯವರಿಂದ ರಾಷ್ಟ್ರ ಜಾಗೃತಿಯ ವಿಶೇಷ ಭಾಷಣ” ಏಕ್ ಭಾರತ್ ಶ್ರೇಷ್ಠ್ ಭಾರತ್ ” ಕಾರ್ಯಕ್ರಮ ನಡೆಯಲಿದೆ. ಇದರ ಜೊತೆಗೆ ಪುತ್ತಿಗೆ ಶ್ರೀಪಾದರ ದಿವ್ಯ ಸಾನ್ನಿಧ್ಯ ಮತ್ತು ಇತರೆ ಗಣ್ಯರ ಉಪಸ್ಥಿತಿಯಲ್ಲಿ ಸಂಜೆ 6 ಕ್ಕೆ ಸುಧರ್ಮ ಸಭೆ, ವಿದುಷಿ ಮಂಜರಿ ಚಂದ್ರಪುಷ್ಪರಾಜ್ ಮತ್ತು ಬಳಗದವರಿಂದ ರಾತ್ರಿ 7 ಕ್ಕೆ ಭರತನಾಟ್ಯ ವೈಭವ ಮತ್ತು ರಾತ್ರಿ 8.30 ರಿಂದ ಶ್ರೀ ಕಟೀಲು ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಲಿದೆ.