ಉಡುಪಿ:ನಿವೃತ್ತ ಪ್ರೊಫೆಸರ್, ಹಿರಿಯ ಸಸ್ಯವಿಜ್ಞಾನಿ ಡಾ.ಕೆ.ಜಿ.ಭಟ್ ನಿಧನ
ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರೊಫೆಸರ್, ಹಿರಿಯ ಸಸ್ಯವಿಜ್ಞಾನಿ ಡಾ.ಕೆ ಗೋಪಾಲಕೃಷ್ಣ ಭಟ್ (75) ಎ. 07 ರ ಮುಂಜಾನೆ ತಮ್ಮ ಚಿಟ್ಪಾಡಿ ಸ್ವಗೃಹದಲ್ಲಿ ದೈವಾಧೀನರಾದರು.
ಮೂಲತಃ ಕಾಸರಗೋಡು ಜಿಲ್ಲೆಯ ನೀರ್ಚಾಲು ಕಾಕುಂಜೆಯವರಾದ ಮೃತರು 33 ವರ್ಷಗಳ ಕಾಲ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಸಸ್ಯಶಾಸ್ತ್ರದಲ್ಲಿ ಹಲವಾರು ಅಧ್ಯಯನಕ್ಕೆ ಪೂರಕ ಪುಸ್ತಕವನ್ನು ಬರೆದಿರುವರು.
ಡಾ| ಕೆ ಜಿ ಭಟ್ ಅವರು ಪೂರ್ಣಪ್ರಜ್ಞ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಪ್ರೊಫೆಸರ್ ಆಗಿದ್ದರು ಸಮರ್ಥವಾಗಿ ಮುನ್ನಡೆಸಿದವರು. ಎರಡು ದಶಕಗಳ ಹಿಂದೆಯೇ ದಕ್ಷಿಣಕನ್ನಡ, ಉಡುಪಿ ಭಾಗಗಳಲ್ಲಿ ಸಸ್ಯಗಳ ಅಧ್ಯಯನ ನಡೆಸಿ ಅದರ ಸಂಪೂರ್ಣ ಮಾಹಿತಿ ದೊರೆಯುವಂತೆ ಪುಸ್ತಕಗಳನ್ನು ಹೊರತಂದವರು. ಸಸ್ಯಶಾಸ್ತ್ರದ ವಿಕಿಪೀಡಿಯ ಎಂದರೂ ತಪ್ಪಾಗಲಾರದುಇಂದು ಹರಿಪಾದಗೈದ ಡಾ|ಕೆ ಜಿ ಭಟ್ ಅವರ ದಿವ್ಯಾತ್ಮಕ್ಕೆ ಸದ್ಗತಿ ಸಿಗಲೆಂದು ಶ್ರೀ ಅದಮಾರು ಮಠದ ಹಿರಿಯ ಯತಿಗಳು ಶ್ರೀವಿಶ್ಚಪ್ರಿಯತೀರ್ಥ ಶ್ರೀಪಾದರು ಹಾಗೂ ಕಿರಿಯ ಶ್ರೀಪಾದರು ಮತ್ತು ಉಡುಪಿ ಶ್ರೀ ಅದಮಾರು ಮಠ ಎಜುಕೇಶನ್ ಕೌನ್ಸಿಲ್ ನ ಅಧ್ಯಕ್ಷರೂ ಆದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಪೊಡವಿಗೊಡೆಯ ಶ್ರೀಕೃಷ್ಣ ಮುಖ್ಯಪ್ರಾಣ ದೇವರಲ್ಲಿ ಪ್ರಾರ್ಥಿಸಿದ್ದಾರೆ.