ಗಿರಿಜಾ ಹೆಲ್ತ್ ಕೇರ್ & ಸರ್ಜಿಕಲ್ಸ್: ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ಉಚಿತ ರಕ್ತ, ಮೂತ್ರ ಪರೀಕ್ಷೆ
ಉಡುಪಿ ಎ.7 (ಉಡುಪಿ ಟೈಮ್ಸ್ ವರದಿ): ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ಗಿರಿಜಾ ಹೆಲ್ತ್ ಕೇರ್ ಆ್ಯಂಡ್ ಸರ್ಜಿಕಲ್ಸ್ ವತಿಯಿಂದ ಗಿರಿಜಾ ಗ್ರೂಪ್ ಕನ್ಸರ್ನ್ನವರ ಅಂಗ ಸಂಸ್ಥೆಯಾದ ಮೆಡಿಕೇರ್ ಲ್ಯಾಬ್ನಲ್ಲಿ 25 ವರ್ಷ ಮೇಲ್ಪಟ್ಟ ಪುರಷರಿಗೆ ಮತ್ತು ಮಹಿಳೆಯರಿಗೆ ಎ.7 ರಿಂದ 13 ರ ವರೆಗೆ ಉಚಿತ ರಕ್ತ ಮತ್ತು ಮೂತ್ರ ಪರೀಕ್ಷೆ ಮಾಡಲಾಗುವುದು.
7 ದಿನಗಳ ಕಾಲ ನಡೆಯುವ ಈ ಉಚಿತ ಶಿಬಿರದಲ್ಲಿ ಬೆಳಿಗ್ಗೆ 6.30ರಿಂದ ಸಂಜೆ 6 ಗಂಟೆಯ ವರೆಗೆ ಮದುಮೇಹ (ಶುಗರ್), ಹಿಮೋಗ್ಲೋಬಿನ್, ಮೂತ್ರ ಪರೀಕ್ಷೆ,ಯುರಿಕ್ ಆಸಿಡ್ ಪರೀಕ್ಷೆ, ಪ್ರೆಗ್ನೆನ್ಸಿ ಪರೀಕ್ಷೆ, ಬ್ಲಡ್ ಗ್ರೂಪಿಂಗ್ ಮತ್ತು ಕಿಡ್ನಿ ಪರೀಕ್ಷೆ ಗಳನ್ನು ಉಚಿತವಾಗಿ ನಡೆಸಲಾಗುತ್ತದೆ. ಅರ್ಹ ನಾಗರಿಕರು ತಮ್ಮ ಆಧಾರ್ ಕಾರ್ಡ್ ದಾಖಲೆ ತೋರಿಸಿ ಈ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.