ಹೆಬ್ರಿ: ವಾಣಿಜ್ಯ ಮಳಿಗೆಯ ಸೀಲ್‌ ಡೌನ್ ತೆರವಿಗೆ ಮನವಿ

ಹೆಬ್ರಿ : ಹೆಬ್ರಿ ಕೆಳೆಪೇಟೆಯಲ್ಲಿ ಕೊರೊನಾ ಪಾಸಿಟಿವ್‌ ಬಂದಿದ್ದು ಅದಕ್ಕಾಗಿ ದೂರದಲ್ಲಿರುವ ವಾಣಿಜ್ಯ ಕಾಂಪ್ಲೇಕ್ಸ್‌ ಸಹಿತ ಹಲವು ಅಂಗಡಿ ಕೋಣೆಗಳನ್ನು ಸೀಲ್‌ ಡೌನ್‌ ಮಾಡಿದ್ದು, ಇದರಿಂದ ನಮ್ಮ ನಿತ್ಯದ ದುಡಿಮೆಗೆ ತೀವೃ ಸಮಸ್ಯೆಯಾಗುತ್ತಿದೆ, ಮೊದಲೇ ಕೊರೊನ ಸಮಸ್ಯೆಯಿಂದಾಗಿ ವ್ಯಾಪಾರವಿಲ್ಲದೆ ಕಂಗೆಟ್ಟು ಹೋಗಿದ್ದೇವೆ, ಕೂಡಲೇ ಸೀಲ್‌ ಡೌನ್‌ ತೆರವು ಮಾಡುವಂತೆ ಸ್ಥಳಿಯರು ಸೋಮವಾರ ಹೆಬ್ರಿ ತಹಶೀಲ್ಧಾರ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಜಿಲ್ಲೆಯ ಬೇರೆ ಕಡೆಯಲ್ಲಿ ಮೂರು ದಿನದಲ್ಲೇ ಸ್ಯಾನಿಟೈಸರ್‌ ಸಿಂಪಡಿಸಿ ಕಟ್ಟಡದ ಬಾಗಿಲು ತೆರೆಯಲು ಅವಕಾಶ ಕೊಟ್ಟಿದ್ದಾರೆ, ಆದರೆ ಹೆಬ್ರಿಯಲ್ಲಿ ಯಾಕೆ ಈ ನೀತಿ ಎಂದು ಅಂಗಡಿ ಮಾಲೀಕರು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!