ಉಡುಪಿ: 3 ಪೊಲೀಸ್ ಸಹಿತ 18 ಜನರಿಗೆ ಪಾಸಿಟಿವ್, ಸೋಂಕಿತರು 71 ಕ್ಕೆ ಏರಿಕೆ

ಉಡುಪಿ: ಜಿಲ್ಲೆಯಲ್ಲಿ ಇಂದೂ ಕೂಡ ಮುಂಬೈನಿಂದ ಬಂದ ಪ್ರಯಣಿಕರಿಂದ ಕೊರೋನಾ ಪಾಸಿಟಿವ್ ಹೆಚ್ಚಾಗಿದ್ದು, ಜಿಲ್ಲೆಯಲ್ಲಿ ಇಟ್ಟು ಸೋಂಕಿತರು 71 ಕ್ಕೆ ಏರಿಕೆಯಾಗಿದೆ. ಕಾರ್ಕಳ ಗ್ರಾಮಾಂತರ ಠಾಣಾ ಕಾನ್ಸ್ಟೇಬಲ್ ಹಾಗೂ ಅಜೆಕಾರು ಠಾಣಾ ಎಎಸೈ, ಬ್ರಹ್ಮಾವರ ಕಾನ್ಸ್ಟೇಬಲ್ ಗೆ ಕೊರೊನಾ ದೃಢ ಪಟ್ಟಿದೆ. ಕಾರ್ಕಳದ ಒಂಭತ್ತು ತಿಂಗಳ ತುಂಬು ಗರ್ಭಿಣಿಗೆ ಸೋಕಿನ ಮೂಲ ಪತ್ತೆ ಮೂಲ ಹುಡುಕುತ್ತಿರುವ ಇಲಾಖೆ.

ಮುಂಬೈನಿಂದ ಬಂದ 13 ಪ್ರಯಣಿಕರಿಂದ ಕೊರೋನಾ ಪಾಸಿಟಿವ್ ದೃಢವಾಗಿದ್ದು, ಜಿಲ್ಲೆಯಲ್ಲಿ ಇಟ್ಟು ಸೋಂಕಿತರು 71ಕ್ಕೆ ಏರಿಕೆಯಾಗಿದೆ.

ಚಿಕ್ಕಬಳ್ಳಾಪುರ 26, ಉಡುಪಿ 18, ಹಾಸನ 14, ಮಂಡ್ಯ 15,  ಕಲಬುರಗಿ 6, ದಾವಣಗೆರೆ 4, ಯಾದಗಿರಿ 5, ತುಮಕೂರು 2, ಉತ್ತರ ಕನ್ನಡ 2, ವಿಜಯಪುರ, ದಕ್ಷಿಣ ಕನ್ನಡ, ಕೊಡಗಿನಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ. 

ರಾಜ್ಯದಲ್ಲಿ ಒಟ್ಟಾರೆ 2056 ಪ್ರಕರಣ ಪೈಕಿ 635 ಮಂದಿ ಗುಣಮುಖರಾಗಿದ್ದಾರೆ. ಇನ್ನು ರಾಜ್ಯದಲ್ಲಿ 1,378 ಪ್ರಕರಣಗಳು ಸಕ್ರಿಯವಾಗಿವೆ. ಒಟ್ಟಾರೆ 42 ಮಂದಿ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!