ಟಿಪ್ಪು ಮುಸ್ಲೀಂ ರಾಜ ಎನ್ನುವ ಕಾರಣಕ್ಕೆ ಸರಕಾರ ಪಠ್ಯ ಕಡಿತಗೊಳಿಸಲು ಮುಂದಾಗಿದೆ: ಎಸ್‍ಡಿಪಿಐ

ಉಡುಪಿ ಮಾ.28 (ಉಡುಪಿ ಟೈಮ್ಸ್ ವರದಿ): ಶತಮಾನಗಳಿಂದ ಕೊಲ್ಲೂರು ದೇವಸ್ಥಾನದಲ್ಲಿ ಟಿಪ್ಪು ಸುಲ್ತಾನ್ ಅವರ ಹೆಸರಿನಲ್ಲಿ ನಡೆದುಕೊಂಡು ಬಂದಿರುವುವಂತಹ ಸಲಾಂ ಮಂಗಳಾರತಿ ಎಂಬ ಪೂಜೆಯನ್ನು ನಿಲ್ಲಸಬೇಕು ಹಾಗೂ ಟಿಪ್ಪು ಸುಲ್ತಾನ್ ಅವರ ಕುರಿತ ಪಠ್ಯವನ್ನು ಶಾಲಾ ಪಠ್ಯ ಪುಸ್ತಕದಿಂದ ಕೈಬಿಡಬೇಕು ಎಂಬ ಸರಕಾರದ ನಿರ್ಣಯವನ್ನು ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಖಂಡಿಸುತ್ತದೆ ಎಂದು ಎಸ್‍ಡಿಪಿಐ ಯ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು ಹೇಳಿದ್ದಾರೆ. 

ಇಂದು ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶತಮಾನಗಳಿಂದ ಕೊಲ್ಲೂರು ದೇವಸ್ಥಾನದಲ್ಲಿ ಟಿಪ್ಪುಸುಲ್ತಾನರ ಹೆಸರಿನಲ್ಲಿ ನಡೆದುಕೊಂಡು ಬಂದಿರುವುವಂತಹ ಸಲಾಂ ಮಂಗಳಾರತಿ ಪೂಜೆಯನ್ನು ನಿಲ್ಲಸಬೇಕು ಎಂಬುದು ಕೋಮುವಾದಿ ನಡೆಯಾಗಿದ್ದು ಇದನ್ನು ನಾನು ಖಂಡಿಸುತ್ತೇನೆ. ಮುಸ್ಲಿಂ ದೊರೆ ಎನ್ನುವ ಕಾರಣಕ್ಕೆ ಇತಿಹಾಸ ತಿರುಚುವುದು ಸರಿಯಲ್ಲ. ಟಿಪ್ಪು ಸುಲ್ತಾನರ ಆಡಳಿತ ಇದ್ದ ಆ ಕಾಲಘಟ್ಟದಲ್ಲಿ 150 ಕ್ಕೂ ಹೆಚ್ಚಿನ ದೇವಸ್ಥಾನಗಳಿಗೆ ಅನುದಾನ ನೀಡುತ್ತಿದ್ದರು, ಶಾರಾದಾಂಬ ಪೀಠಕ್ಕೆ ಪೇಶ್ವೆಯರು ದಾಳಿ ಮಾಡಿದ್ದ ಸಂದರ್ಭದಲ್ಲಿ ಅನುದಾನ ನೀಡಿ ರಕ್ಷಣೆ ಮಾಡಿ ಪರಮಧರ್ಮ ಸಹಿಷ್ಣು ರಾಜ ಎನಿಸಿಕೊಂಡಿದ್ದರು. ಆದರೆ ಟಿಪ್ಪು ಸುಲ್ತಾನ್ ಓರ್ವ ಮುಸ್ಲಿಂ ದೊರೆ ಎನ್ನುವಂತಹ ಕಾರಣಕ್ಕೆ ಸರಕಾರದ ಅವರ ಹೆಸರಿನಲ್ಲಿ ಜನರು ನಂಬಿಕೆಯಿಂದ ನಡೆಸುತ್ತಿರುವ ಸಲಾಂ ಮಂಗಳಾರತಿಯನ್ನು ನಿಲ್ಲಿಸಬೇಕು ಎಂಬ ನಡೆ ತಪ್ಪು ಸಂದೇಶವನ್ನು ಕೊಡುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ವೇಳೆ ಟಿಪ್ಪು ಸುಲ್ತಾನ್ ಅವರ ಕುರಿತ ಪಠ್ಯ ಕೈ ಬಿಡುವ ಬಗ್ಗೆ ಪ್ರತಿಕ್ರಿಯೆ ನೀಡುವ ಅವರು, ಟಿಪ್ಪು ಸುಲ್ತಾನ್ ರಂತಹ ಮಹಾನ್ ದೂರದೃಷ್ಠಿ ಇರುವ ರಾಜರ ಪಾಠವನ್ನು ಮಕ್ಕಳಿಗೆ ಕಳುಹಿಸಬೇಕು. ಆಡಳಿತ ನಡೆಸುವ ಒಬ್ಬ ರಾಜ ಹೇಗಿರಬೇಕು ಅಥವಾ ರಾಜಕಾರಣಿ ಹೇಗಿರಬೇಕು ಎನ್ನುವ ಪಾಠವನ್ನು ಅವರು ಕಲಿಸಿಕೊಟ್ಟಿದ್ದಾರೆ. ಆಗಿನ ಕಾಲಘಟ್ಟದಲ್ಲಿ 35,000 ಕೆರೆ ಕಟ್ಟೆಗಳನ್ನು ಕಟ್ಟಿದ ರಾಜ ಅವರು. ಈಗಿನ ಸರಕಾರಗಳಿಗೆ ಆ ರೆಕೆ ಕಟ್ಟೆಗಳ ಹೂಳು ತೆಗೆಯಲೂ ಸಾಧ್ಯವಾಗುತ್ತಿಲ್ಲ. ಅಂತಹ ಪರಿಸ್ಥಿತಿ ಇದೆ. ಬರಗಾಲದ ಸಂದರ್ಭದಲ್ಲಿ ರೇಷ್ಮೆ ಬೆಳೆಯನ್ನು ಪರಿಚರಿಸಿದ್ದು ಸೇರಿದಂತೆ ಹಲವು ಸುಧಾರಣೆಗಳನ್ನು ಮಾಡಿದ್ದಾರೆ.  ಇವರ ಕೊಡುಗೆಗಳನ್ನು ಹೇಳುತ್ತಾ ಹೋದರೆ ಅದೇ ಒಂದು ಚರಿತ್ರೆ ಆಗುತ್ತದೆ.

ಇವರು ತಳವರ್ಗದ, ಶೂದ್ರ ಹೆಣ್ಣು ಮಕ್ಕಳು ಕುಪ್ಪಸವನ್ನು ತೊಡಬಾರದು ಎಂಬ ಘೋರ ನಿಯಮವನ್ನು ರದ್ದುಗೊಳಿಸಿದವರು, ಮದ್ಯಪಾನ ನಿಷೇಧಿಸಿದವರು ಇಂತಹ ಮಹಾನ್ ರಾಜನ ಕುರಿತು ಶಾಲಾ ಮಕ್ಕಳಿಗೆ  ತಿಳಿಸಬೇಕು. ಆದರೆ ಟಿಪ್ಪು ಸುಲ್ತಾನ್ ಓರ್ವ ಮುಸ್ಲೀಂ ರಾಜ ಎನ್ನುವ ಕಾರಣಕ್ಕೆ ಬಿಜೆಪಿ ರಾಜ್ಯ ಸರಕಾರ ಪಠ್ಯ ಕಡಿತಗೊಳಿಸಲು ಮುಂದಾಗಿದ್ದನ್ನು ಎಲ್ಲಾ ಪ್ರಜ್ಞಾವಂತರು, ಸಾಹಿತಿಗಳು, ಪ್ರಗತಿಪರರು, ಖಂಡಿಸಬೇಕು ಎಂದು ಮನವಿ ಮಾಡಿಕೊಂಡರು. 

ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಮಾಡಿರುವುದು ಸೌಹಾರ್ದ ಪರಂಪರೆಗೆ ಧಕ್ಕೆ: ಇದೇ ವೇಳೆ ಅವರು, ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಮಾಡಿರುವುದು ಇದು ನಮ್ಮ ನಾಡಿನ ಸೌಹಾರ್ದ ಪರಂಪರೆಗೆ ಧಕ್ಕೆ ಆಗುವ ಜೊತೆಗೆ ಆರ್ಥಿಕ ನಷ್ಟಕ್ಕೂ ಕಾರಣವಾಗಬಹುದು. ಲಕ್ಷಾಂತರ ಹಿಂದೂ ಧರ್ಮಿಯರು ಸೇರಿದಂತೆ ಬೇರೆ ಬೇರೆ ಸಮುದಾಯದ ಜನರು ಗಲ್ಫ್ ರಾಷ್ಟ್ರಗಳಲ್ಲಿ ಉದ್ದಿಮೆ, ಆಸ್ಪತ್ರೆಗಳನ್ನು ನಡೆಸುತ್ತಿದ್ದಾರೆ. ಅಲ್ಲಿ ಒಂದು ಸೌಹಾರ್ಧ ಸಂಬಂಧ ವಿದೆ. ನಾವು ಇಂಧನ ಗಳಿಗೆ ಇಸ್ಲಾಮಿಕ್ ರಾಷ್ಟ್ರಗಳನ್ನು ಅವಲಂಭಿಸಿದ್ದೇವೆ ಎನ್ನುವುದನ್ನು ಒಪ್ಪಿಕೊಳ್ಳ ಬೇಕಾಗುತ್ತದೆ. ದೇಶದ ಬಗ್ಗೆ ದೂರುದೃಷ್ಠಿಯನ್ನು ಇಟ್ಟುಕೊಂಡು ಇವುಗಳನ್ನು ನಿಲ್ಲಿಸಬೇಕಾಗಿದೆ. ಇದರಿಂದ ಯಾರಿಗೂ ಒಳ್ಳೆಯದಲ್ಲ. ಇಂತಹ ವಿಚಾರದಲ್ಲಿ ರಾಜ್ಯ ಸರಕಾರ ಸೂಕ್ಷ್ಮವಾಗಿ ಪರಿಗಣಿಸಿ ಮಧ್ಯೆ ಪ್ರವೇಶಿಸಿ ಇವುಗಳನ್ನು ಅಂತ್ಯಗೊಳಿಸಬೇಕು ಎಂದರು.

Leave a Reply

Your email address will not be published. Required fields are marked *

error: Content is protected !!