ಇಂದಿನ ರಾಜಕೀಯದಲ್ಲಿ ಪ್ರಚಾರವೇ ಪ್ರಧಾನ ಪಾತ್ರವಹಿಸುತ್ತಿದೆ: ಕುದಿ ವಸಂತ ಶೆಟ್ಟಿ 

ಉಡುಪಿ: ಸಮಾಜದ ಎಲ್ಲ ವರ್ಗದ ಮತ್ತು ಎಲ್ಲಾ ಧರ್ಮದ ಜನ ಸಾಮಾನ್ಯರ ಪ್ರೀತಿಗೆ ಪಾತ್ರರಾಗಿದ ಓಸ್ಕರ್ ಫೆರ್ನಾಂಡಿಸ್ ರವರು ಎಲ್ಲಾ ಧರ್ಮವನ್ನು ಕೂಡ ಆಳವಾಗಿ ಅಬ್ಯಾಸಿಸಿದ್ದರು . ಹಿಂದೂ ದರ್ಮದ ಕೆಲವು ಸಂಗತಿಗಳನ್ನು ಹೇಳಲು ನಾನು ತಡವರಿಸಿದರೂ ಅವರು ಸರಾಗವಾಗಿ ಅದರ ಬಗ್ಗೆ ಮಾತನಾಡುತ್ತಿದ್ದರು. ನಗರ ಸಭೆಯಿಂದ ತಮ್ಮ ಸಕ್ರಿಯ ರಾಜಕಾರಣವನ್ನು ಪ್ರಾರಂಭಿಸಿದ ಅವರು ರಾಷ್ಟ್ರ ರಾಜಕಾರಣಕ್ಕೆ ಏರಿದ್ದರೂ ಕೂಡ ಅವರು ತಾವು ಬಂದ ದಾರಿಯನ್ನೂ ಎಂದೂ ಮರೆತಿರಲಿಲ್ಲ.

ಅವರ ರಾಜಕೀಯ ಬೆಳವಣಿಗೆಗೆ  ತಳಮಟ್ಟದಲ್ಲಿ ಅವರ ಸಂಘಟನೆಯ ಕೆಲಸಗಳು ಮುಖ್ಯ ಕಾರಣವಾಯಿತು ..ಈ ಕಾರಣದಿಂದಾಗಿ ರಾಜಕೀಯವಾಗಿ ಅವರಿಗೆ ದೊರೆತ ಸ್ಥಾನಮಾನಗಳು ಅರ್ಹವಾಗಿಯೇ ದೊರಕಿದೆ. ಮತ್ತು ಅದನ್ನು ಅವರು ಪರಿಣಾಮಕಾರಿಯಾಗಿ ಮತ್ತು ಜನಪರವಾಗಿ ನಿಭಾಯಿಸಿದ್ದಾರೆ. ಅವರ ರಾಜಕೀಯ ಬದುಕಿನ ಶಬ್ದ ಕೋಶದಲ್ಲಿ ದ್ವೇಷ, ಸಿಟ್ಟು ,ಸೆಡವು, ಅಸಹನೆ ಎಂಬ ಪದಗಳೇ ಇರಲಿಲ್ಲ. ಎಲ್ಲರೊಡನೆ ಸ್ನೇಹದಲ್ಲಿ ಬದುಕಿದವರು ಇವರು. ಎಂದೂ ಕೂಡಾ ಅವರು ಪ್ರಚಾರದ ಹಿಂದೆ ಹೋದವರಲ್ಲ. ತಾನು ಮಾಡಿದ ಕೆಲಸ ಯಾರಿಗೆ ಅಗತ್ಯವಿತ್ತೋ ಅವರಿಗೆ ಉಪಯೋಗವಾದರೆ ಸಾಕು ಪ್ರಚಾರವಾಗಿ ಏನೂ ಆಗ ಬೇಕಾಗಿಲ್ಲ ಎಂಬ ದೋರಣೆ ಅವರದ್ದು. ಹಾಗಾಗಿ ಅವರು ಏನು ಎಂದು ಅರ್ಥವಾಗಲೇ ಇಲ್ಲ. ಅವರ ಸಾಧನೆಗಳು ಅನಾವರಣಗೊಂಡದ್ದು ಅವರು ನಿಧನರಾದಾಗ  ಮಾಧ್ಯಮಗಳ ಮೂಲಕ. ಆಗ ಓಸ್ಕರ್ ಜನರಿಗೆ ಅರ್ಥವಾದರು.

ಅವರು ಬದುಕಿದ್ದಾಗ ಮಾಧ್ಯಮಗಳು ಕೂಡಾ ಅವರ ಕೆಲಸಗಳನ್ನು ಗುರುತಿಸುವಲ್ಲಿ ಸೋತವು ಮತ್ತು ಸ್ವತಾ ಓಸ್ಕರ್ರವರಿಗೆ ಅದು ಬೇಡವಾಗಿತ್ತು. ಆದರೆ ಇಂದಿನ ರಾಜಕೀಯದಲ್ಲಿ ಪ್ರಚಾರವೇ ಪ್ರಧಾನ ಪಾತ್ರವಹಿಸುತ್ತಿದೆ. ತಾನಾಯಿತು ತನ್ನ ಕೆಲಸವಾಯಿತು ಎಂದು ಬದುಕಿದ ಓಸ್ಕರಣ್ಣ ಜನ ಸಾಮಾನ್ಯರ ಮತ್ತು ನಮ್ಮಂತವರ ಹೃದಯಾಂತರಾಳದಲ್ಲಿ ಸದಾ ಅಜರಾಮರರು ಎಂದು .ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ ಮುಖ್ಯೋಪಾಧ್ಯಾಯರಾದ ಕುದಿ ವಸಂತ ಶೆಟ್ಟಿಯವರು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಕಾಂಗ್ರೆಸ್ ಭವನದಲ್ಲಿ ಜರಗಿದ, ರಾಷ್ಟ್ರ ನಾಯಕ ದಿ.ಓಸ್ಕರ್ ಫೆರ್ನಾಂಡಿಸ್ ಅವರ 82 ನೇ ಜನ್ಮದಿನಾಚರಣೆ ಕಾರ್ಯಕ್ರಮದದಲ್ಲಿ ಭಾಗವಹಿಸಿ ನುಡಿದರು .
ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆಯವರು  ಓಸ್ಕರ್ ಫೆರ್ನಾಂಡಿಸ್ ಅವರು ನಮ್ಮನಗಲಿ ಆರು ತಿಂಗಳು ಕಳೆದಿದೆ. ರಾಜಕೀಯದಲ್ಲಿ ಒಂದು ದೊಡ್ಡ ನಿರ್ವಾತವನ್ನೇ ಅವರು ಬಿಟ್ಟು ಹೋಗಿದ್ದಾರೆ . ಸದ್ಯಕ್ಕಂತೂ ಅ ನಿರ್ವಾತ ತುಂಬಲು ನಮ್ಮಿಂದ ಆಗ್ತಾ ಇಲ್ಲ.ತಳ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು ಕೊಟ್ಟ ಓಸ್ಕರಣ್ಣ ಅದರಲ್ಲಿ ಯಶಸ್ವಿಯಾದರು . ಸರಳ ಸಜ್ಜನಿಕೆಯ .ಅಜಾತ ಶತ್ರು ಆದ  ಇವರು ರಾಜಕೀಯ ವ್ಯಕ್ತಿಗಳಿಗೊಂದು ಮಾದರಿ ಮತ್ತು ಇವರ ರಾಜಕೀಯ ಬದುಕು ಮುಂದಿನ ಪೀಳಿಗೆಗೆ ಅಭ್ಯಾಸ ಮಾಡಲು ಒಂದು ಪಠ್ಯ ಎಂದರು.

ಮಾಜಿ ಶಾಸಕರಾದ ಯು.ಆರ್. ಸಭಾಪತಿ ಓಸ್ಕರೊಂದಿಗೆ ತನ್ನ ಒಡ ನಾಟದ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು . ಓಸ್ಕರಣನ ಒಡನಾಡಿಗಳಾದ ರೆ.ಫಾ.ವಿಲಿಯಂ ಮಾರ್ಟಿಸ್. ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾ ಎಂ.ಎ. ಗಫೂರ್ ತಮ್ಮ ಮತ್ತು ಓಸ್ಕರಣ್ಣ ಒಡನಾಟದ ಕೆಲವು ಸಂಗತಿಗಳನ್ನು ಧಾಖಲಿಸಿದರು. ಮಾಜಿ ವಿಧಾನ ಪರಿಷತ್ ನ ಸಭಾಪತಿಗಳಾದ ಕೆ.ಪ್ರತಾಪ ಚಂದ್ರ ಶೆಟ್ಟಿ ಉಪಸ್ಥಿತರಿದ್ದರು. 

ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಅಲೆವೂರು ಹರೀಶ್ ಕಿಣಿ ವಂದಿಸಿದರು. ಉದ್ಯಾವರ ನಾಗೇಶ್ ಕುಮಾರ್ ಕಾರ್ಯಕ್ರಮ ನಿರ್ವಹಸಿದರು. ಈ ಸಂದರ್ಭ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ದಿನೇಶ್ ಪುತ್ರನ್, ಪ್ರಧಾನ ಕಾರ್ಯದರ್ಶಿಗಳಾದ ಕಿಶನ್ ಹೆಗ್ಡೆ ಕೊಳ್ಳೆಬೈಲ್, ಕುಶಾಲ್ ಶೆಟ್ಟಿ ಇಂದ್ರಾಳಿ, ಬಿ.ನರಸಿಂಹಮೂರ್ತಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರುಗಳಾದ ರಮೇಶ್ ಕಾಂಚನ್, ದಿನಕರ ಹೇರೂರು, ಸಂತೋಷ್ ಕುಲಾಲ್, ಹರಿಪ್ರಸಾದ್ ಶೆಟ್ಟಿ, ಶಂಕರ ಕುಂದರ್, ಮಂಜುನಾಥ ಪೂಜಾರಿ ಹೆಬ್ರಿ ಮುರಳಿ ಶೆಟ್ಟಿಇಂದ್ರಾಳಿ, ದಿವಾಕರ ಕುಂದರ್, ದಿಲೀಪ್ ಹೆಗ್ಡೆ , ಶಬರೀಶ್ ಸುವರ್ಣ, ಮಹಮ್ಮದ್ ಅಶ್ಫಕ್, ಸದಾಶಿವ ಕಟ್ಟೆಗುಡ್ಡೆ, ಮೇರಿ ಶ್ರೇಷ್ಟ, ಪ್ರಮೀಳಾ, ಸಿ.ಆರ್ ಬಲ್ಲಾಳ್, ಕೇಶವ ಕೋಟ್ಯಾನ್, ಜಯ ಸೇರಿಗಾರ್, ಭಾಸ್ಕರ ಸೇರಿಗಾರ್, ಅಜಯ್, ಸುನಿಲ್ ಬಂಗೇರ, ಗಣೇಶ್ ನೆರ್ಗಿ, ರೋಷನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!