ಉಡುಪಿ: ಕೊಳೆತ ಮೃತ ದೇಹದೊಂದಿಗೆ ಮೂರು ದಿನ ಕಳೆದ ಹೆತ್ತಬ್ಬೆ, ಸಹೋದರಿ!

ಉಡುಪಿ,ಮಾ.25: ವದ್ಧರೊರ್ವರ ಶವವು ಕೊಳೆತ ಸ್ಥಿತಿಯಲ್ಲಿ ಕಾಡಬೆಟ್ಟು ಇಲ್ಲಿರುವ ಮನೆಯಲ್ಲಿ ಶುಕ್ರವಾರ ಕಂಡುಬಂದಿದೆ. ವೃದ್ಧರನ್ನು ಹರಿಶ್ಚಂದ್ರ ಪೂಜಾರಿ(62)ಎಂದು ಗುರುತಿಸಲಾಗಿದೆ.ವೃದ್ಧರು ಮೃತಪಟ್ಟು ಮೂರು ದಿನಗಳು ಕಳೆದಿರಬಹುದೆಂದು ಅಂದಾಜಿಸಲಾಗಿದೆ.ಮನೆಯಲ್ಲಿ ಇರ್ವರು ಮನೊವ್ಯಾಧಿಯಿಂದ ಬಳಲುತ್ತಿರುವ ವೃದ್ಧೆ ಮತ್ತು ಮಹಿಳೆ ಕೊಳೆತ ಶವದೊಂದಿಗೆ 3 ದಿನಗಳನ್ನು ಕಳೆದಿದ್ದಾರೆ.ವಾಸನೆ ಹಬ್ಬಿದರಿಂದ ಸ್ಥಳಿಯರಿಗೆ ವಿಷಯ ತಿಳಿದುಬಂದಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. 

ಘಟನಾ ಸ್ಥಳದಲ್ಲಿದ್ದು ಠಾಣಾ ನಿರೀಕ್ಷಕ ಪ್ರಮೋದ್ ಪಿ, ಠಾಣಾಧಿಕಾರಿ ಮಹೇಶ್, ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು ಕಾನೂನು ಪ್ರಕ್ರಿಯೆ ನಡೆಸಿದರು. ಕಳೇಬರ ವೈದ್ಯಕೀಯ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು, ಎಂ ಸಂದೀಪ್ ಕುಮಾರ್, ಮಹೇಶ್ ಪೂಜಾರಿ ಶಿರಿಬೀಡು, ಸಹಕರಿಸಿದರು..

Leave a Reply

Your email address will not be published. Required fields are marked *

error: Content is protected !!