ಜಿಲ್ಲಾಡಳಿತ ತಕ್ಷಣ ಮಧ್ಯ ಪ್ರವೇಶಿಸಿ ಜಾತಿ, ಮತ ಭೇದ ನೋಡದೆ ಬೀದಿ ಬದಿ ವ್ಯಾಪಾರಿಗಳಿಗೆ ನ್ಯಾಯ ಒದಗಿಸಬೇಕು- ರಮೇಶ್ ಕಾಂಚನ್

ಉಡುಪಿ: ಬೀದಿ ಬೀದಿಗಳಲ್ಲಿ ವ್ಯಾಪಾರ ಮಾಡುವ ಜನರು ಬಡವರು, ಅವರಲ್ಲಿ ಯಾವುದೇ ರೀತಿಯ ಜಾತಿ ಭೇದವಿಲ್ಲ. ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ಅವರು ಅವರ ಹಾಗೂ ಅವರ ಕುಟುಂಬದ ಹೊಟ್ಟೆಪಾಡಿಗಾಗಿ ವ್ಯಾಪಾರ ಮಾಡುತ್ತಾರೆ. ಅಂತವರು ಎಲ್ಲಾ ಧರ್ಮಗಳ ಜಾತ್ರೆಯಲ್ಲಿ ಇರುತ್ತಾರೆ. ಎಲ್ಲಾ ಧರ್ಮದಲ್ಲಿಯೂ ಇಂತಹ ವ್ಯಾಪಾರಸ್ಥರನ್ನು ನಾವು ನೋಡಬಹುದು. ಇತ್ತೀಚಿನ ದಿನಗಳಲ್ಲಿ ಒಂದು ಧರ್ಮದ ಧಾರ್ಮಿಕ ಕಾರ್ಯಕ್ರಮಕ್ಕೆ ಇನ್ನೊಂದು  ಧರ್ಮದವರನ್ನು ವ್ಯಾಪಾರ ಮಾಡಲು ಬಿಡುವುದಿಲ್ಲ ಎಂದು ಹೇಳುವುದು ಸೌಹಾರ್ದತೆಗೆ ದಕ್ಕೆ ತರುವಂತದಾಗಿದೆ ಹಾಗೂ ಸಂವಿಧಾನ ವಿರೋಧಿ ನಿಲುವು ಆಗಿರುತ್ತದೆ.

ಈಗಾಗಲೇ ಕೊರೋನಾ ಎಂಬ ಮಹಾಮಾರಿಯಿಂದ ಜನರಿಗೆ ಬದುಕಲು ಕಷ್ಟವಾಗಿದೆ. ಇಂತಹ ಸಮಯದಲ್ಲಿ ಬಡ ವ್ಯಾಪಾರಸ್ಥರಿಗೆ ತಮ್ಮ ದಿನನಿತ್ಯದ ಅವಶ್ಯಕತೆಗೊಸ್ಕರ ವ್ಯಾಪಾರ ಮಾಡಲು ಜಿಲ್ಲಾಡಳಿತ ಮತ್ತು ಸರ್ಕಾರ ತಕ್ಷಣವೇ ಮಧ್ಯ ಪ್ರವೇಶಿಸಿ ಯಾವುದೇ ಜಾತಿ, ಮತ ಭೇದ ನೋಡದೆ ಈ ಬಡ ಬೀದಿ ಬದಿ ವ್ಯಾಪಾರಿಗಳಿಗೆ ನ್ಯಾಯ ಒದಗಿಸಬೇಕಾಗಿ ಆಗ್ರಹಿಸುತ್ತೇನೆ.

ಇದೇ ಸಂದರ್ಭದಲ್ಲಿ ಮುಲ್ಕಿಯ ಪ್ರಸಿದ್ಧ ದೇವಸ್ಥಾನವಾದ ಬಪ್ಪನಾಡು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮಂಡಳಿಯು ತೆಗೆದುಕೊಂಡ ನಿರ್ಧಾರವು ಸೌಹಾರ್ದತೆಯನ್ನು ಮೂಡಿಸುವಂತದಾಗಿದೆ. ಈ ನಿಲುವನ್ನು ನಾನು ಸ್ವಾಗತಿಸುತ್ತೇನೆಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!