| ಪಡುಬಿದ್ರಿ ಮಾ.23(ಉಡುಪಿ ಟೈಮ್ಸ್ ವರದಿ): ನಿರುದ್ಯೋಗದಿಂದ ಮಾನಸಿಕ ಖಿನ್ನತೆಗೆ ಒಳಗಾದ ಕಾಪುವಿನ ಹೆಜಮಾಡಿಯ ಯಶವಂತ ಶೆಟ್ಟಿ ಎಂಬವರು ಇಂದು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಯಶವಂತ ಶೆಟ್ಟಿ(54) ಎಂಬವರು ಈ ಹಿಂದೆ ಮುಂಬೈಯಲ್ಲಿ ಹೋಟೆಲ್ ಮಾಡಿಕೊಂಡಿದ್ದು, ಕಳೆದ 3 ವರ್ಷದ ಹಿಂದೆ ಲಾಕ್‌ಡೌನ್ ಕಾರಣ ತಮ್ಮ ಊರಾದ ಕಾಪುವಿನ ಹೆಜಮಾಡಿಯಲ್ಲಿರುವ ಅವರ ಮನೆಗೆ ಬಂದಿದ್ದರು. ಬಳಿಕ ಯಾವುದೇ ಕೆಲಸವಿಲ್ಲದೇ ಮನೆಯಲ್ಲಿಯೇ ಇದ್ದು, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಇದಕ್ಕಾಗಿ ಚಿಕಿತ್ಸೆಯನ್ನೂ ಪಡೆದುಕೊಳ್ಳುತ್ತಿದ್ದರು. ಆದರೆ ಇಂದು ಮಾನಸಿಕ ಖಿನ್ನತೆಯ ವಿಚಾರಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪ್ರಕಾಶ್ ಶೆಟ್ಟಿ ಎಂಬವರು ನೀಡಿದ ಮಾಹಿತಿಯಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. | |