ಸಿದ್ದರಾಮಯ್ಯನವರೇ ಮುಸಲ್ಮಾನರ ಮೇಲೆ ಇರುವ ಕಾಳಜಿ ಮೀನುಗಾರರ ಮೇಲೆ ಯಾಕೆ ಇರಲಿಲ್ಲ?- ಸುನಿಲ್ ಕೆ.ಆರ್
ಉಡುಪಿ ಮಾ.23(ಉಡುಪಿ ಟೈಮ್ಸ್ ವರದಿ): ವ್ಯಾಪಾರ ಬಹಿಷ್ಕಾರ ಪ್ರವೃತ್ತಿ ಮೊದಲು ಆರಂಭ ಆಗಿದ್ದೇ ಮುಸಲ್ಮಾನರಿಂದ ಎಂದು ಭಜರಂಗದಳ ಪ್ರಾಂತ ಸಂಚಾಲಕ ಸುನಿಲ್ ಕೆಆರ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಅ.21 ರಂದು ಗಂಗೊಳ್ಳಿಯಲ್ಲಿ ಅಕ್ರಮ ಗೋ ಸಾಗಾಣಿಕೆ, ಕಸಾಯಿ ಖಾನೆ, ಮನೆಯ ಮೇಲೆ ದಾಳಿ ಹಾಗೂ ಗೋಹತ್ಯೆ ವಿರುದ್ದ ಪ್ರತಿಭಟನೆ ನಡೆಸಿದ್ದಕ್ಕೆ ಮರುದಿನವೇ ಅಲ್ಲಿ ಮುಸಲ್ಮಾನರು ಹಿಂದುಗಳ ಮೀನು ಖರೀದಿಗೆ ಬಹಿಷ್ಕಾರ ಹಾಕಿದ್ದರು. ಹಿಂದುಗಳೊಂದಿಗೆ ವ್ಯಾಪಾರ ಮಾಡುವುದಿಲ್ಲ ಎಂದು ಹೇಳಿದ್ದ ಅವರ ಮಾನಸಿಕತೆ ಎಂತಹದ್ದು, ಅವರು ಹಲಾಲ್ ನ ಬಗ್ಗೆ ಆಲೋಚನೆ ಮಾಡುತ್ತಾ ವ್ಯಾಪಾರವನ್ನು ಕ್ರೋಡೀಕರಿಸಿ ಆರ್ಥಿಕ ಹೊಡೆತ ನೀಡುವ ಕೆಲಸ ಮಾಡಿದ್ದರು. ಆದ್ದರಿಂದ ವ್ಯಾಪಾರ ಬಹಿಷ್ಕಾರ ಪ್ರವೃತ್ತಿ ಮೊದಲು ಆರಂಭ ಆಗಿದ್ದೇ ಮುಸಲ್ಮಾನರಿಂದ ಎಂದು ಅನ್ನಿಸುತ್ತದೆ ಎಂದವರು ಹೇಳಿದರು.
ಇದೇ ವೇಳೆ ಅವರು, ದೇವಸ್ಥಾನಗಳಲ್ಲಿ ಮುಸನ್ಮಾನರಿಗೆ ವ್ಯಾಪಾರಕ್ಕೆ ಅವಕಾಶ ನೀಡದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮುಸನ್ಮಾನರ ಮೇಲೆ ಅನುಕಂಪ ತೋರುತ್ತಿದ್ದಾರೆ. ಸಿದ್ದರಾಮಯ್ಯನವರೇ ಮುಸಲ್ಮಾನರ ಮೇಲೆ ಇರುವ ಅನುಕಂಪ ಕಾಳಜಿ ಅಂದು ಗಂಗೊಳ್ಳಿಯ ಮೀನುಗಾರರ ಮೇಲೆ ಯಾಕೆ ಇರಲಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಹಾಗೂ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂಬಂತೆ ಯಾಕೆ ಮಾತನಾಡುತ್ತೀರಾ ಎಂದು ಕೇಳಿದ ಅವರು, ನೀವು ರಾಜಕಾರಣಿ ರಾಜಕೀಯ ಮಾಡಿ ಆದರೆ ಹಿಂದುತ್ವದ ವಿಚಾರದಲ್ಲಿ ನೀವು ದೂರ ಇರುವುದೇ ಒಳ್ಳೆಯದು ಎಂದು ಅವರು ಹೇಳಿದ್ದಾರೆ.