3 ಪೊಲೀಸರಿಗೆ ಕೊರೋನಾ: ಬ್ರಹ್ಮಾವರ, ಕಾರ್ಕಳ, ಅಜೆಕಾರು ಠಾಣೆ ಸಿಲ್ ಡೌನ್!
ಕಾರ್ಕಳ: ಇಲ್ಲಿನ ಗ್ರಾಮಾಂತರ ಠಾಣಾ ಕಾನ್ಸ್ಟೇಬಲ್, ಬ್ರಹ್ಮಾವರ ಕಾನ್ಸ್ಟೇಬಲ್ ಹಾಗೂ ಅಜೆಕಾರು ಠಾಣಾ ಎಎಸೈಗೆ ಕೊರೊನಾ ದೃಢ ಪಟ್ಟಿದೆ. ಆದ್ದರಿಂದ ಈ ಮೂರೂ ಠಾಣೆಗಳನ್ನು ಸಿಲ್ ಡೌನ್ ಮಾಡಲಾಗುತ್ತದೆಂಬ ಮಾಹಿತಿ ಇದೆ. ಕಾರ್ಕಳ ಗ್ರಾಮಾಂತರ, ನಗರ ಹಾಗೂ ವೃತ್ತನಿರೀಕಕ್ಷರ ಕಚೇರಿ ಒಂದೇ ಕಟ್ಟಡದಲ್ಲಿದೆ. ಕಾರ್ಕಳ ಗ್ರಾಮಾಂತರ ಠಾಣಾ ಸಿಬ್ಬಂದಿ ಉತ್ತರ ಕರ್ನಾಟದವರರಾಗಿದ್ದು, ಇವರ ಪತ್ನಿ ಬಂಟ್ವಾಳದಲ್ಲಿ ಸರಕಾರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚೆಗೆ ಡೆಲಿವರಿಯಾಗಿದ್ದ ಇವರನ್ನು ಪೊಲೀಸ್ ಕಾನ್ಸ್ಟೇಬಲ್ ನೋಡಲು ಹೋಗಿದ್ದರು. ಸದ್ಯ ಹೆರಿಗೆಯಾದ ಪತ್ನಿ, ಮಗುವಿನ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ.
ಅಜೆಕಾರ್ ಎಎಸೈ ಅವರು ಮುಂಬೈ ನಿಂದ ಬಂದ ಪ್ರಯಾಣಿಕರ ಬೆಂಗಾವಲು ವಾಹನದಲ್ಲಿ ಕಾರ್ಯನಿರ್ವಹಿಸಿದ್ದರು, ಮಾತ್ರವಲ್ಲದೆ ಕಾರ್ಕಳ ಗಡಿ ಭಾಗದಲ್ಲಿ ವಾಹನ ತಪಾಸಣಾ ಕಾರ್ಯದಲ್ಲಿ ತೊಡಗಿದ್ದ ಇವರಿಗೆ ಸೋಂಕು ತಗಲಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಬ್ರಹ್ಮಾವರ ಕಾನ್ಸ್ಟೇಬಲ್ ಗೆ ಸೋಂಕು ದೃಢವಾಗುತ್ತುದ್ದಂತೆ ಮೂರು ಠಾಣೆಯ ಸಿಬ್ಬಂದಿ, ಮನೆಯವರು ಸೇರಿ 100 ಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗುವುದೆನ್ನುವ ಮಾಹಿತಿ ಲಭ್ಯವಾಗಿದೆ.
ಕೊರೊನಾ ವೈರಸ್ ದೃಢ ಪಡುತ್ತಿರುವ ಮಾಹಿತಿಯ ನಡುವೆ ಇಲಾಖೆಯ ಸೂಚನೆಯಂತೆ ಕಾರ್ಕಳ ನಗರ, ಕಾರ್ಕಳ ಗ್ರಾಮಾಂತರ ಹಾಗೂ ವೃತ್ತ ನಿರೀಕ್ಷಕರ ಕಚೇರಿ ಹೊಂದಿರುವ ಕಟ್ಟಡ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಇದರಿಂದಾಗಿ ಪೊಲೀಸ್ ಸಿಬ್ಬಂದಿಗಳು ಠಾಣೆಯ ಹೊರಗಡೆ ಇರುವ ಮರದಡಿಯಲ್ಲಿ ನಿಂತು ಕಾರ್ಯನಿರ್ವಹಿಸುತ್ತಿದ್ದಾರೆ.