“ಪ್ರಧಾನಮಂತ್ರಿ ಜನಕಲ್ಯಾಣಕಾರೀ ಯೋಜನೆ ಪ್ರಚಾರ ಪ್ರಸಾರ ಅಭಿಯಾನದ” ಪದಾಧಿಕಾರಿಗಳ ಆಯ್ಕೆ

ಉಡುಪಿ: ಕೇಂದ್ರ ಸರಕಾರದ ಎಲ್ಲಾ ಸರಕಾರಿ ಯೋಜನೆಗಳನ್ನು ಜನಸಾಮಾನ್ಯರಿಗೆ ಹಾಗೂ ದೇಶದ ಕಟ್ಟ ಕಡೆಯ ಜನರಿಗೆ ತಲುಪಿಸುವ ಉದ್ದೇಶದಿಂದ ರಚಿಸಲ್ಪಟ್ಟಿರುವ “ಪ್ರಧಾನಮಂತ್ರಿ ಜನಕಲ್ಯಾಣಕಾರೀ ಯೋಜನೆ ಪ್ರಚಾರ ಪ್ರಸಾರ ಅಭಿಯಾನದ” ಉಡುಪಿ ಜಿಲ್ಲಾಧ್ಯಕ್ಷರಾಗಿ ಮನ್ ಸುಖ್ ಲಾಲ್  ಜೆ. ಪಟೇಲ್ ಅವರು ಆಯ್ಕೆಯಾಗಿದ್ದಾರೆ.

ಉಡುಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಟೇಶ್ ವೈ ಆರ್. ಉಡುಪಿ, ಸಹ ಕಾರ್ಯದರ್ಶಿ  ಮೋಹನ್ ಭಟ್, ಯುವ ವಿಭಾಗ ಅಧ್ಯಕ್ಷರಾಗಿ ರಘುನಾಥ ಜೆ. ಆಚಾರ್ಯ, ಸಂಘಟನಾಕಾರ್ಯದರ್ಶಿ ಅಶೋಕ್ ಕಿಣಿ,  ಗ್ರಾಮ ವಿಕಾಸ ಅಧ್ಯಕ್ಷರಾಗಿ ಮಕರಂದ ಪಡುಬಿದ್ರಿ, ಸಂಘಟನಾ ಕಾರ್ಯದರ್ಶಿ ವಿಜಯಕುಮಾರ್ ಶೆಟ್ಟಿ.

ಮಹಿಳಾ ವಿಭಾಗ ಅಧ್ಯಕ್ಷರಾಗಿ ಅಕ್ಷತಾ ಗಿರೀಶ್ ಆಯ್ಕೆಯಾಗಿದ್ದಾರೆ. ಸಂಘಟನಾ ಕಾರ್ಯದರ್ಶಿ ಲಕ್ಷೀ ಪಿ. ಎಸ್ ಸಹ ಕಾರ್ಯದರ್ಶಿ ಕಸ್ತೂರಿ ಆಚಾರ್ಯ, ಕಾನೂನು ವಿಭಾಗ ದಿನೇಶ್ ಸಿ ನಾಯ್ಕ್. ಐಟಿ ವಿಭಾಗ ಚೇತನ್ ಹೆಗ್ಡೆ ಅವರು ಆಯ್ಕೆಯಾಗಿರುತ್ತಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯ ಸದಸ್ಯರು ತಮ್ಮ ನಿತ್ಯ ವ್ಯವಹಾರದ ಮಧ್ಯೆ ಕೆಲವು ಸಮಯವನ್ನು ಸಮಾಜ ಸೇವೆಗಾಗಿ ಮೀಸಲಿಟ್ಟು ಉಚಿತವಾಗಿ ಜನರಿಗೆ ಸರಕಾರಿ ಸೇವಾ ಯೋಜನೆಗಳ ಬಗ್ಗೆ ಸೂಕ್ತ ಮಾಹಿತಿ ಹಾಗೂ ಮಾರ್ಗದರ್ಶನ ನೀಡುವ ಕೆಲಸ ಮಾಡಲಿದೆ.
 
ಉಡುಪಿಯಲ್ಲಿ ಎರಡು, ಕಾಪು, ಪಡುಬಿದ್ರಿ, ಕುಂದಾಪುರದಲ್ಲಿ ಒಂದು ಸುವಿಧಾ ಕೇಂದ್ರಗಳು ತೆರೆದಿದ್ದು . ಮುಂದೆ ಇಂತಹಾ ಸುವಿಧಾ ಕೇಂದ್ರಗಳು ಗ್ರಾಮೀಣ ಸ್ತರದಲ್ಲಿಯೂ ತೆರೆಯಲಿದೆ. ಸಾರ್ವಜನಿಕರಿಗೂ ಮುಂದೆ ಸುವಿಧಾ ಕೇಂದ್ರ ತೆರೆಯುವ ಅವಕಾಶ ಕಲ್ಪಸಿಕೊಡಲಾಗುವುದು ಎಂದು ಉಡುಪಿ ಜಿಲ್ಲಾ ಸಮಿತಿಯ ಪ್ರಕಟಣೆ ತಿಳಿಸಿದೆ.

1 thought on ““ಪ್ರಧಾನಮಂತ್ರಿ ಜನಕಲ್ಯಾಣಕಾರೀ ಯೋಜನೆ ಪ್ರಚಾರ ಪ್ರಸಾರ ಅಭಿಯಾನದ” ಪದಾಧಿಕಾರಿಗಳ ಆಯ್ಕೆ

  1. Good luck. God bless you and your team. Please provide me the address and telephone number of Suvidha Kendra in Udupi District. Please call me. Sudheer Kanchan, MA. Phone number : 9845863196.

Leave a Reply

Your email address will not be published. Required fields are marked *